ರಕ್ತದಾನ ಶ್ರೇಷ್ಠದಾನ : ಡಾ.ಪ್ರಭಾ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ

ಹರಿಹರ.ಸೆ.24; ರಕ್ತದಾನ ಶ್ರೇಷ್ಠದಾನ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಬೇಕು ಎಂದು ಎಸ್ ಎಸ್ ಕೇರ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ಹರಿಹರದ  ಶ್ರೇಯಾ ಆಸ್ಪತ್ರೆ ಆವರಣದಲ್ಲಿ ಹರಿಹರ ತಾಲ್ಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ರವರ 56 ನೇಯ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಕ್ತದಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಇನ್ನೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ ರಕ್ತ ದಾನದ ಬಗ್ಗೆ ಜಾಗೃತಿ ಮೂಡಿಸಲು ಶಾಲೆಮಟ್ಟದಲ್ಲಿ ಶಿಬಿರ ಆಯೋಜಿಸುವ ಯೋಜನೆ ಇದೆ ಎಂದರು. ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ  ನೇತೃತ್ವದಲ್ಲಿ ಕಳೆದ ವರ್ಷ ನಡೆದ ಶಿಬಿರದಲ್ಲಿ ಹೆಚ್ಚು ರಕ್ತದಾನ ಮಾಡಲಾಗಿತ್ತು ಅವರ ನೇತೃತ್ವದಲ್ಲಿ ಹರಿಹರ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ನಡೆಯಲಿ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹರಳಹಳ್ಳಿ ಬಸಪ್ಪ, ನಂದಿಗಾವಿ ಶ್ರೀನಿವಾಸ, ಬ್ಲಾಕ್ ಅದ್ಯಕ್ಷರಾದ ಎಲ್.ಬಿ.ಹನುಮಂತಪ್ಪ, ಎಂ.ಬಿ.ಅಬಿದ್ ಅಲಿ,ಮುಖಂಡರಾದ ಟಿ.ಮುರಗೇಶಪ್ಪ, ಹನುಮಂತಪ್ಪ ರೆಡ್ಡಿ, ಸೈಯದ್ ಸನಾವುಲ್ಲಾ ನಗರಸಭೆ ಸದಸ್ಯರಾದ ಶಂಕರ್ ಖಟಾವಕರ್.ಬಾಬುಲಾಲ್ ಸಾಬಿರ್ ಅಲಿ, ಅರಿಫ್ ಅಲಿ,ಕೆ.ಪಿ. ಗಂಗಾಧರ. ಭೋವಿ ಕುಮಾರ್. ಸೈಯದ್ ಜಾಕಿರ್ ,ಬಿ.ಬಿ. ಮಲ್ಲೇಶ್ ಕಮಲಾಪುರ್,ಮಲ್ಲಿನಾಥ.ಶಿವಕುಮಾರ್ ಒಡೆಯರ್. ಭಾಗ್ಯ ದೇವಿ.ಜಮಿಲಾ ಭಾಗವಹಿಸಿದ್ದರು.