ರಕ್ತದಾನ ಶ್ರೇಷ್ಠದಾನ ಕಾರ್ಯಕ್ಕೆ ಕೈಜೋಡಿಸಿಃಉಮಾಕಾಂತ ಸಾಹುಕಾರ ಸೀಕಲ್

ಮಾನ್ವಿ,ನ.೦೮- ಎಲ್ಲಾ ದಾನಗಳಲ್ಲಿಯೇ ಸರ್ವಶ್ರೇಷ್ಠ ದಾನವಾಗಿರುವ ರಕ್ತದಾನವಾಗಿದ್ದು ಯುವಕರು ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ತುಂಬಾ ಶ್ಲಾಘನೀಯ ಎಂದು ಹಿರಿಯ ಬಿಜೆಪಿ ಮುಖಂಡ ಉಮಾಕಾಂತ ಸಾಹುಕಾರ ಸೀಕಲ್ ಹೇಳಿದರು.
ತಾಲೂಕಿನ ಸೀಕಲ್ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸ್ವಾಮಿವಿವೇಕಾನಂದ ಯುವಕ ಸಂಘ ಮತ್ತು ರೆಡ್‌ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಮಿವಿವೇಕಾನಂದ ಯುವಕ ಸಂಘವು ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಅಪಾಯದಲ್ಲಿರುವವರ ಜೀವ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಯುವ ಪೀಳಿಗೆ ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳಬೇಕೆಂದು ಉಮಾಕಾಂತ ಸಾಹುಕಾರ ಸೀಕಲ್ ತಿಳಿಸಿದರು.
ಈ ವೇಳೆ ಮಹಿಳಾ ತಜ್ಞೆ ಡಾ.ಅಂಬಿಕಾ ಮಧುಸೂಧನ್, ಮುಖಂಡ ಶ್ರೀನಿವಾಸ ಸಾಹುಕಾರ ಸೀಕಲ್, ರೈತಸಂಘದ ಜಿಲ್ಲಾಧ್ಯಕ್ಷೆ ಅನಿತಾ ಬಸವರಾಜ, ನಮ್ಮ ಮಾನ್ವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೆಚ್.ಮೌನೇಶ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ತಾಲೂಕ ಕಾರ್ಯದರ್ಶಿ ಡಾ.ಮಹೆಬೂಬ್ ಮದ್ಲಾಪುರು, ಮುಖ್ಯಗುರು ಟಿ.ನರಸಯ್ಯಶೆಟ್ಟಿ ಸೇರಿದಂತೆ ಗ್ರಾಮದ ಮುಖಂಡರು, ವೈಧ್ಯರು, ಯುವಕ ಸಂಘದ ಪದಾಧಿಕಾರಿಗಳು ಇದ್ದರು.