ಕಲಬುರಗಿ,ಜು 4: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಶಾಖೆ ಮತ್ತು ಎಲ್ ಆಂಡ್ ಟಿ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ನಗರದ ಎಲ್‍ಆಂಡ್‍ಟಿ ಕಾರ್ಯಾಲಯ ಆವರಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಎಲ್ ಆಂಡ್ ಟಿ ಲಿಮಿಟೆಡ್‍ನ ಜನರಲ್ ಮ್ಯಾನೇಜರ್ ಸಂಜಯ ಕುಮಾರ ಅವರು ರಕ್ತದಾನ ಮಾಡುವ ಮುಖಾಂತರ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಯಾ, ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಉಪಸಮಿತಿಯ
ಸದಸ್ಯರಾದ ಜಿ. ಎಸ್. ಪದ್ಮಾಜಿ ಮತ್ತು ಎಲ್ ಆಂಡ್ ಟಿ ಯ ವೆಲ್ಲರೂ ಅಂಜಯ್ಯ, ಗೊಲ್ಲಾಳಪ್ಪ ಮಾಸ್ಟರ, ಪಿ.ಎಸ್ ಹರೀಶ ಬಾಬು, ರಕ್ತ ನಿಧಿ ಕೇಂದ್ರದ ಡಾ. ಪೂರ್ವಿ ರೇವೂರ, ಪರಮೇಶ್ವರ ಗುಡ್ಡಾ, ವೀರಭದ್ರಪ್ಪಾ ಹೂಗಾರ, ಚನ್ನಮಲ್ಲಪ್ಪಾ ಸಾರಳೆ ಮತ್ತು ನರೇಶಕುಮಾರ
ತಿವಾರಿ ಅವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 35 ಜನ ರಕ್ತದಾನ ಮಾಡಿದರು. ಎಲ್ಲ ನೌಕರರು ಸ್ವಯಂ ರಕ್ತದಾನ ಮಾಡಿ ಬೇರೆ ನೌಕರರಿಗೆ ಮಾದರಿಯಾದರು.