ರಕ್ತದಾನ ಶಿಬಿರ

ಬ್ಯಾಡಗಿ, ಏ 4: ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ಶ್ರೀಜಗದ್ಗುರು ಜಯದೇವ ಮುರುಘರಾಜೇಂದ್ರ ಕಲಾ,ಕ್ರೀಡೆ,ಸಂಸ್ಕೃತಿ ಸೇವಾ ಸಂಸ್ಥೆ ಬ್ಯಾಡಗಿ, ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕ, ಜಿಲ್ಲಾ ರಕ್ತ ಭಂಡಾರ ಘಟಕ ಮತ್ತು ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಕಾರ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು

ಈ ಶಿಬಿರದಲ್ಲಿ ಒಟ್ಟು 35 ಜನ ರಕ್ತದಾನ ಮಾಡಿ ಜೀವದಾನಿಯಾಗಿದ್ದು, 30 ಜನರಿಗೆ ರಕ್ತದ ಗುಂಪು ಪರೀಕ್ಷೆಯ ಜೊತೆಗೆ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಕ್ತದಾನಿಗಳಿಗೆ ಸನ್ಮಾನಿಸಿ ಪ್ರಮಾಣಪತ್ರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ರಕ್ತ ಭಂಡಾರದ ವೈದ್ಯಾಧಿಕಾರಿಗಳಾದ ಬಸವರಾಜ ತಳವಾರ, ಬಸವರಾಜ ಕಮತರ, ನ್ಯಾಸ ಘಟಕದ ರಾಜ್ಯ ಸಂಚಾಲಕ ಎಂ.ಡಿ.ಚಿಕ್ಕಣ್ಣನವರ, ಜಿಲ್ಲಾ ಸಂಯೋಜಕಿ ಫರೀದಾ ನದ್ದಿಮುಲ್ಲಾ, ಮಹಾದೇವಕ್ಕ ಕಾರಿ, ಜೆ.ಸಿ.ಆಯ್ ಹಾವೇರಿ ಘಟಕದ ಅಧ್ಯಕ್ಷ ಮಂಜುನಾಥ ಚೂರಿ, ವೀರಯ್ಯ ಪ್ರಸಾಧಿಮಠ, ಗ್ರಾಪಂ ಅಧ್ಯಕ್ಷೆ ರೂಪಾ ಕಾಡಮ್ಮನವರ, ಪಿಡಿಓ ಮಲ್ಲೇಶ ಮೋಟೆನವರ, ಗ್ರಾಪಂ ಸದಸ್ಯರಾದ ವೀರಣ್ಣ ಹಿರೇಮಠ, ಪ್ರವೀಣ ಹೊನ್ನಪ್ಪನವರ, ಹನುಮಂತ ನೇಕಾರ, ನಾಗಲಿಂಗ ತಳವಾರ, ನಾಗರಾಜ ಪೆÇಟಿ, ಹಾಲಪ್ಪ ಭಂಗಿ, ಗ್ರಾಮಸ್ಥರಾದ ಕುಮಾರ ಹುಲ್ಮನಿ, ಕಲ್ಲಪ್ಪ ಹುಲ್ಮನಿ, ಕುಮಾರ ಚೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.