ರಕ್ತದಾನ ಶಿಬಿರ

ಬಳ್ಳಾರಿ, ಮಾ.27: ನಗರದ ಕೌಲ್ ಬಜಾರ್ ನ ಎಕ್ಸ್ ಮನ್ ಕಾಲೋನಿಯ ಸಿರತುಮ್ ಮಸೀದಿ ಆವರಣದಲ್ಲಿ ಲಿಯಾ ಸಂಸ್ಥೆಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕ್ಷಯ ರೋಗ ನಿರ್ಮೂಲ ಕೇಂದ್ರದ ಮುಖ್ಯಸ್ಥೆ ಡಾ|| ಇಂದ್ರಾಣಿ ಅವರು ಶಿಬಿರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರೋನಾದಿಂದಾಗಿ ರಕ್ತದ ಕೊರತೆ ಆಸ್ಪತ್ರೆಗಳಲ್ಲಿ ಕಾಡುತ್ತಿದೆ ಅದಕ್ಕಾಗಿ ಯುವ ಜನತೆ ಹೆಚ್ಚು ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಮಾಂಟು ಪತ್ತಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಲಿಯಾ ಸಂಸ್ಥೆಯ ಮುಖ್ಯಸ್ಥ ಅಬ್ರಾಹಂ, ಕಾರ್ಯದರ್ಶಿ ಫರೀದಾ, ಕಾಲೋನಿಯ ಯುವ ಸಮೂಹ ಇದ್ದರು.