
ಮಾನ್ವಿ,ಮಾ.೧೬- ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯಘಾತದ ಸಂಭವ ಕಡಿಮೆಯಾಗುವುದು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ, ಇತರರ ಜೀವ ಉಳಿಸಿದಂತಾಗುತ್ತದೆ, ರಕ್ತದಾನ ಮಾಡಿ ಜೀವ ಉಳಿಸಿ ಎಂದು ಶಿಬಿರದಲ್ಲಿ ರಕ್ತ ದಾನ ಮಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾ. ಅಧ್ಯಕ್ಷರಾದ ಅರುಣ್ ಚಂದಾ ತಿಳಿಸಿದರು.
ಶ್ರೀ ರುದ್ರಮುನೀಶ್ವರಮಠ ಚೀಕಲಪರ್ವಿ, ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು, ಶ್ರೀ ರುದ್ರಮುನೇಶ್ವರ ಮಠ ಚೀಕಲಪರ್ವಿ ಪೂಜ್ಯರ ೯ನೇ ಪುಣ್ಯ ಸ್ಮರಣೆಯ ನಿಮಿತ್ತ ಮಾನ್ವಿ ಪಟ್ಟಣದಲ್ಲಿ ಸಕಲ ಸದ್ಭಕ್ತರ ಸಮಕ್ಷಮದಲ್ಲಿ ಸಾರ್ಥಕ ದಿನ ಎಂಬ ನಾಮದೊಂದಿಗೆ ರಕ್ತದಾನ ಶಿಬಿರ ಇಂದು ಕಳಿಂಗ ಪಿಯು ಕಾಲೇಜ್ ಆವರಣದಲ್ಲಿ ನಡೆಯಿತು.
ರಕ್ತದಾನ ಶಿಬಿರದಲ್ಲಿ ಪೂಜ್ಯರು,ಹಲವಾರು ವಿದ್ಯಾರ್ಥಿಗಳು, ಯುವಕರು,ಸಾರ್ವಜನಿಕರು ಪಾಲ್ಗೊಂಡಿದ್ದರು.