ರಕ್ತದಾನ ಶಿಬಿರ ಉದ್ಘಾಟನೆ

ಬಾದಾಮಿ,ಜೂ12: ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದಾಗಿದೆ ಎಂದು ಎಸ್.ಬಿ.ಎಂ.ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಮೂಲಿಮನಿ ಹೇಳಿದರು.
ಅವರು ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹೇಮ ವೇಮ ಚಾರಿಟೇಬಲ್ ಸಂಸ್ಥೆ, ಜಿಲ್ಲಾ ಹಾಗೂ ತಾಲೂಕಾಸ್ಪತ್ರೆ, ರಕ್ತ ಭಂಡಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಹೇಮ ವೇಮ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೈಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತ ಭಂಡಾರ ಡಾ.ಗುರುನಾಥ ವಾಲೀಕಾರ, ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಕಾರುಡಗಿಮಠ, ಡಾ.ಮನಿಯಾರ, ಸಂಸ್ಥೆಯ ಉಪಾಧ್ಯಕ್ಷ ಡಿ.ಪಿ.ಅಮಲಝರಿ, ಮುದಗಲ್ ಹಾಜರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಎ.ಭರಮಗೌಡರ ಸ್ವಾಗತಿಸಿದರು. ಸಿ.ಎಸ್.ಹೊಸಗೌಡ್ರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಎಸ್.ಬಿ.ಮಮದಾಪೂರ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಕ್ರಂ ಪೈಲ್ ಪ್ರತಿಷ್ಠಾನ ಹಾಗೂ ವೀರಪುಲಿಕೇಶಿ ಸಹಕಾರಿ ಬ್ಯಾಂಕ್ ಸಹಕಾರ ನೀಡಿದರು. ಇದೇ ಸಂದರ್ಭದಲ್ಲಿ ಬಸವರಾಜ ಕೊಣ್ಣೂರ ಅವರು 84 ನೇ ಬಾರಿ ರಕ್ತದಾನ ಮಾಡಿ, ಮಾನವೀಯತೆ ಮೆರೆದರು. ಶಿಬಿರದಲ್ಲಿ ಒಟ್ಟು 35 ಜನ ರಕ್ತದಾನ ಮಾಡಿದರು.