ರಕ್ತದಾನ ಶಿಬಿರಕ್ಕೆ ಮೇಯರ್ ಚಾಲನೆ

ಸಂಜೆವಾಣಿ ವಾರ್ತೆದಾವಣಗೆರೆ. ಅ.೧೨; ಮಹಾನಗರ ಪಾಲಿಕೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ  ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು  ಮಹಾಪೌರರಾದ  ವಿನಾಯಕ್ ಪೈಲ್ವಾನ್  ಮತ್ತು ಆಯುಕ್ತರಾದ ಶ್ರೀಮತಿ ರೇಣುಕಾ  ಶಿಬಿರಕ್ಕೆ ಚಾಲನೆ ನೀಡಿದರು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಗೌಡ್ರು ಚೆನ್ನಬಸಪ್ಪ, ಆನಂದ ಜ್ಯೋತಿ, ನಿರ್ದೇಶಕರಾದ ಡಾ. ರವಿಕುಮಾರ್ ಎ.ಜೆ,  ಜಗದೀಶ್,ಶಿವಾನಂದ್,ಶ್ರೀಮತಿ ಜಯಮ್ಮ ಗೋಪಿನಾಯ್ಕ್, 14 ಜನ ಪಾಲಿಕೆ ಸಿಬ್ಬಂದಿ ರಕ್ತದಾನ ಮಾಡಿದರು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಾವಣಗೆರೆ ದಕ್ಷಿಣ ವಿಭಾಗದ ಪದಾಧಿಕಾರಿಗಳು ಕೂಡ ಇದ್ದರು