ರಕ್ತದಾನ ಶಿಬಿರಕ್ಕೆ ಚಾಲನೆ    

ಸೊರಬ.ಜೂ.15; ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಛೇರಿ.ರಾಜ್ಯ ‌ಸರ್ಕಾರಿ ನೌಕರರ ಸಂಘ ತಾಲೂಕು ಘಟಕ, ಆಯುಷ್ ಇಲಾಖೆ.ವಿವಿಧ  ಇಲಾಖೆಗಳ  ಹಾಗೂ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಪರಿಸರ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ  ತಾಲೂಕು  ವೈದ್ಯಾಧಿಕಾರಿ  ಡಾ.ಪ್ರಭು ಸಾಹುಕಾರ್,    ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ.ಎಸ್,ಉದ್ರಿ ಆಯುಷ್ ವೈದ್ಯ ಮಹೇಶ್,ಡಾ,ರಜನಿ,ಡಾ, ಸತೀಶ್, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಕಾಳಿಂಗರಾಜ್, ಸದಾನಂದ, ಶಂಕರ್ ಶೇಟ್, ರೇಣುಕಮ್ಮ ಗೌಳಿ, ನಾಗರಾಜ್ ಗುತ್ತಿ, ಸಂತೋಷ್ ಸೇರಿದಂತೆ ಮೊದಲಾದವರಿದ್ದರು.