ರಕ್ತದಾನ ಮುಖಾಂತರ ಹಲವು ಜೀವಗಳ ರಕ್ಷಿಸಬಹುದು. :ಜಿನ್ ರಾಜ್ ಜೈನ್

ಶಿವಮೊಗ್ಗ.ಮಾ.೨೩; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ದೇಶಾಭಿಮಾನಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ, ಇಂದು ಬೆಳಿಗ್ಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮ ದಿವಸ ಭಗತ್ ಸಿಂಗ್,, ರಾಜಗುರು ,ಸುಖದೇವ್ ಇವರ ಬಲಿದಾನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ .ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಜಿನ್ ರಾಜ್ ಜೈನ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿ, ಭಾರತ ಸ್ವಯಂಪ್ರೇರಿತರಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಜೀವನ ಚರಿತ್ರೆ ನೆನಪಿಸಿ ಅವರ ಹಾದಿಯಲ್ಲೇ ಯುವ ಜನತೆ ದೇಶಭಕ್ತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ರಕ್ತದಾನ ಮಾಡಿ ದೇಶ ಸೇವೆಯನ್ನು ಹಾಗೂ ದೇಶಾಭಿಮಾನವನ್ನು ಪ್ರಕಟಿಸಬಹುದಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ರಕ್ತದಾನಿ ಸೇವಾ ಸಂಘ ಮಾಜಿ ಅಧ್ಯಕ್ಷರಾದ ಜಿ ವಿಜಯ್ಕುಮಾರ್ ,ರೆಡ್ ಕ್ರಾಸ್ ಸಂಸ್ಥೆಯ ಧರಣೇಂದ್ರ ದಿನಕರ್ , 22ನೇ ಮತ್ತು 23ನೇ ವಾರ್ಡಿನ ಭಾಜಪದ ಕಾರ್ಯಕರ್ತರಾದ ವಿನೋದ್ ಕುಮಾರ್ ಶೇಟ್ ,ದಿನೇಶ್ ದಸ್ ವೈಷ್ಣವ್, ಧನಲಕ್ಷ್ಮೀ ಜಿವೆಲ್ಲರಿ ಗಿರೀಶ, ಓಂ ಗಣೇಶ್ ರಕ್ತದಾನ ಸ್ವಯಂ ಸಂಘದ ನಿತಿನ್,ವಿ .ಹೆಚ್. ಪಿ ಸಂದೀಪ್ ಜಗದಾಳೆ, ನವೀನ್, ಪವನ್ ಸತೀಶ್ ನಾಡಿಗ್ ಉಪಸ್ಥಿತರಿದ್ದರು.