ರಕ್ತದಾನ ಮಾಡಿ ಜೀವ ಉಳಿಸಿ-ಶಾಂತಮಲ್ಲ

ರಾಯಚೂರು,ಏ.೧೬-ಭಾರತೀಯ ರೆಡ್‌ಕ್ರಾಸ್ ತಾಲೂಕ ಶಾಖೆ ರಾಯಚೂರು, ಮಾರ ಕೇರ್ ವೆಲ್ಫರ್ ಸೋಸೈಟಿ (ಎನ್.ಜಿ.ಒ.) ಕಾನಪೂರು (ಉ.ಪ್ರ) ರಾಯಚೂರು ಬ್ರ್ಯಾಂಚ್, ರಿಮ್ಸ್ ಬೋಧಕೇತರ ಆಸ್ಪತ್ರೆ ಹಾಗೂ ರಕ್ತನಿಧಿ ವಿಭಾಗ ರಿಮ್ಸ್ ಬೋಧಕೇತರ ಆಸ್ಪತ್ರೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪೂಜ್ಯ ಶಾಂತಮಲ್ಲ ಶಿವಚಾರ್ಯ ಸ್ವಾಮೀಜಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತ ಇವತ್ತಿನ ದಿನ ಪ್ರತಿ ಆಸ್ಪತ್ರೆಯಲ್ಲಿ ರಕ್ತಕ್ಕಾಗಿ ರೋಗಿಗಳು ಪರದಾಡುತ್ತಾರೆ ಅವರ ಸಹಾಯಕ್ಕಾಗಿ ಜೀವ ಉಳಿಸಲು ರಕ್ತದಾನ ಬಹಳ ಅವಶ್ಯ ಪ್ರತಿಯೊಬ್ಬರು ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶೇಖ್ ಮೆಹಬೂಬ್ ಮಲಿಯಬಾದ್ ಅಧ್ಯಕ್ಷರು ಭಾರತೀಯ ರೆಡ್‌ಕ್ರಾಸ್ ತಾಲೂಕ ಶಾಖೆ ಇವರು ಮಾತನಾಡುತ್ತ ಇಂದಿನ ದಿನಮನದಲ್ಲಿ ಅಪಘಾತ ಆದಾಗ ಮಾತ್ರ ರಕ್ತದ ಅವಶ್ಯ ಇರುತ್ತಿತು. ಆದರೆ ಈಗ ಗರ್ಭಿಣಿಯ ಮಹಿಳೆಯರಲ್ಲಿ, ಮಕ್ಕಳಲ್ಲಿ ರಕ್ತ ಹಿನಾತೆ ಆಗುತ್ತಿದೆ ಇಂತಹ ಸಂದರ್ಭದಲ್ಲಿ ರಕ್ತ ಬಹಳ ಮುಖ್ಯ ರಕ್ತದಾನ ಶ್ರೇಷ್ಠದಾನ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಡಾ.ಗುರುರಾಜ ಕುಲಕರ್ಣಿ ವೈದ್ಯಾಧಿಕಾರಿಗಳು ರಕ್ತನಿಧಿ ಕೇಂದ್ರ ರಿಮ್ಸ್ ಬೋಧಕೇತರ ಆಸ್ಪತ್ರೆ ರಾಯಚೂರು ಇವರು ಮಾತನಾಡುತ್ತ ರಕ್ತದಾನ ಮೂರು ತರದ ಉಪಯೋಗಿಸಲಾಗುತ್ತದೆಂದು ವಿವರವಾಗಿ ತಿಳಿಸಿದರು.
ನರಸಪ್ಪ ಶಕ್ತಿನಗರ ಎಮ್ ಕೇರ್, ರಾಮಯ್ಯ ನಾಯಕ ವಕೀಲರು ಹಾಗೂ ಆರ್.ಪಿ. ಮಲ್ಲಿಕಾರ್ಜುನ ವೇದಿಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಕ್ತಾಯದ ನಂತರ ಶಿಬಿರಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ನರಸಿಂಹ ಎಮ್ ಕೇರ್ ನಡೆಸಿಕೊಟ್ಟರೆ ಕೊನೆಯಲ್ಲಿ ಅಭಿಷೇಕ್ ಯರಮರಸ್ ಸರ್ವರನ್ನು ವಂದಿಸಿದರು.