ರಕ್ತದಾನ ಮಾಡಿ ಜೀವವುಳಿಸುವ ಕಾರ್ಯಕ್ಕೆ ಮುಂದಾಗಿ:ಡಾ.ಬಿರಾದಾರ

ತಾಳಿಕೋಟೆ : ಜ.13:ಮಾನವನ ಜೀವನದಲ್ಲಿ ಅನೇಕ ನಮೂನೆಯ ದಾನ ಮಾಡುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ ವಿವಿಧ ದಾನಗಳಲ್ಲಿ ಮಹಾ ದಾನವಾಗಿ ಮಾರ್ಪಟ್ಟಿರುವ ರಕ್ತದಾನವೆಂಬುದು ಮಹತ್ವದ ಸ್ಥಾನ ಮಾನ ಪಡೆದಿದೆ ಎಂದು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಏಡ್ಸ್, ಟಿ.ಬಿ. ರೋಗ ನಿಯಂತ್ರಣ ಮತ್ತು ರಕ್ತ ಸಂಗ್ರಹ ಘಟಕಾಧಿಕಾರಿಯಾದ ಡಾ.ಮಲ್ಲನಗೌಡ ಬಿರಾದಾರ ಅವರು ಹೇಳಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಕಲಾ ವಾಣಿಜ್ಯ, ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸ ಅಂಗವಾಗಿ ಮಹಾ ವಿಧ್ಯಾಲಯದ ವಿವಿಧ ಘಟಕಗಳನ್ನೋಳಗೊಂಡು ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರಕ್ತ ಎಂಬುದು ಕೃತಕವಾಗಿ ತಯಾರಿಸುವಂತಹ ವಸ್ತು ಅಲ್ಲಾ ರಕ್ತವೆಂಬುದು ಮಾನವನ ಹೋಗುವ ಜೀವ ಉಳಿಸುವ ಕಾರ್ಯ ಮಾಡಲಿದೆ ಎಂದರು. ದಾನಗಳಲ್ಲಿ ಭೂದಾನ, ನೇತ್ರದಾನ, ದೇಹದಾನ, ಅಂಗಾಂಗಗಳ ದಾನ ಹಣಕಾಸಿನ ದಾನ, ಇವೇಲ್ಲವುಗಳು ಮಹತ್ವದ ಸ್ಥಾನ ಪಡೆದಿದ್ದರೂ ಇವುಗಳೊಂದಿಗೆ ರಕ್ತದಾನವೆಂಬುದು ಅಗ್ರ ಸ್ಥಾನ ಪಡೆದಿದೆ ಎಂದರು. ರಕ್ತದಾನ ಕುರಿತು ವಿಜಯಪುರ ಜಿಲ್ಲೆಯಲ್ಲಿ ಏರ್ಪಡಿಸುತ್ತಾ ಸಾಗಿ ಬರಲಾದ ಕ್ಯಾಂಪ್‍ಗಳ ಸೇವಾ ಕಾರ್ಯವನ್ನು ನೋಡಿದರೆ ರಾಜ್ಯದಲ್ಲಿಯೇ ಮೊದಲನೇಯ ಸ್ಥಾನ ಪಡೆದಿದೆ ಎಂದು ಹೇಳಿದ ಡಾ.ಬಿರಾದಾರ ಅವರು ಜಿಲ್ಲೆಯಲ್ಲಿ 9 ಬ್ಲಡ್ ಬ್ಯಾಂಕುಗಳಿವೆ ಎಂದು ವಿವರಿಸಿದ ಅವರು ರಕ್ತದಾನ ಮಾಡುವ ಜನತೆ ಸದೃಡವಾಗಿರಬೇಕೆಂದು ವಯೋಮಿತಿ ಹಾಗೂ ತೂಕದ ಪ್ರಮಾಣ ಕುರಿತು ವಿವರಿಸಿದ ಅವರು ವರ್ಷದಲ್ಲಿ 4 ಸಲ ರಕ್ತದಾನ ಮಾಡಬಹುದಾಗಿದೆ ಎಂದರು. ರಕ್ತದಾನ ಮಾಡುವದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಉಪಸ್ಥಿತ ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಡಾ.ಬಿರಾದಾರ ಅವರು ತಾಳಿಕೋಟೆಯ ಜನತೆ ಆದರ್ಶ ಪ್ರೀಯರಾಗಿದ್ದಾರೆ ರಕ್ತದಾನ ಮಾಡುವದರಲ್ಲಿಯೂ ಸಹ ಮುಂಚೂಣಿಯಲ್ಲಿದ್ದಾರೆಂದರು.
ಇನ್ನೋರ್ವ ಅತಿಥಿ ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ ಮಾನವರಾದ ನಾವು ಆರೋಗ್ಯವೇ ಭಾಗ್ಯವೆಂದು ತಿಳಿದು ನಡೆಯಬೇಕು ಆರೋಗ್ಯವಂತರಾಗಿ ಬಾಳಬೇಕಾಗಿದೆ ರಕ್ತವೆಂಬುದು ಮಾನವನ ಜೀವ ಉಳಿಸುವ ಕಾರ್ಯಕ್ಕೆ ಸಹಾಯಕಾರಿಯಾಗಲಿದೆ ಅಪಘಾತ ಸಮಯದಲ್ಲಿಯೂ ಸಹ ಅಪಘಾತಹೊಂದಿದವರಿಗೆ ರಕ್ತದ ಅವಶ್ಯಕತೆ ಬಿಳ್ಳುತ್ತದೆ ಆ ಅವಶ್ಯಕತೆಯನ್ನು ಪೂರೈಸುವ ಕಾರ್ಯಕ್ಕೆ ಮುಂದಾದರೆ ಅಲ್ಲಿ ಸಂಬಂದ ಬೆಸೆಯುವ ಕಾರ್ಯವೂ ಕೂಡಾ ಮಾಡಿದಂತಾಗುತ್ತದೆ ಎಂದ ಅವರು ಆನೆಕಾಲ ರೋಗದ ಕುರಿತು ಅದಕ್ಕೆ ಸಂಬಂದಿಸಿದ ಮಾತ್ರೆ ಸೇವಿಸುವ ಕುರಿತು ಮುಂಜಾಗೃತೆ ಕ್ರಮ ಕೈಗೊಳ್ಳುವ ಕುರಿತು ವಿವರಿಸಿದರು.
ಈ ಶಿಬಿರದಲ್ಲಿ 100 ಜನ ವಿಧ್ಯಾರ್ಥಿಗಳ ತಪಾಸಣೆ ನಡೆಸಲಾಯಿತ್ತಲ್ಲದೇ 70 ಜನ ವಿಧ್ಯಾರ್ಥಿಗಳ ರಕ್ತ ಸಂಗ್ರಹಿಸಲಾಯಿತು.
ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷರಾದ ಬಿ.ಎನ್.ಹಿಪ್ಪರಗಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿಯಾದ ಶ್ರೀಮತಿ ನಮೀತಾ ಹೊನ್ನುಟಗಿ, ವೀ.ವಿ.ಸಂಘದ ನಿರ್ದೇಶಕರಾದ ಎಂ.ಆರ್.ಕತ್ತಿ, ಸಿ.ಆರ್.ಕತ್ತಿ, ಕಾಲೇಜ್ ಆಡಳಿತ ಮಂಡಳಿಯ ಸದಸ್ಯರಾದ ಸಿದ್ದಲಿಂಗ ಸರೂರ, ಪ್ರಭುಗೌಡ ಮದರಕಲ್ಲ, ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ, ಮೊದಲಾದವರು ಉಪಸ್ಥಿತರಿದ್ದರು.
ಪ್ರೋ.ರಮೇಶ ಜಾಧವ ಸ್ವಾಗತಿಸಿದರು. ಕುಮಾರಿ ತೇಜಸ್ವೀನಿ ಡಿಸಲೆ ನಿರೂಪಿಸಿದರು. ಡಾ.ಆರ್.ವ್ಹಿ.ಮಿಸ್ಕನ್ ವಂದಿಸಿದರು.