ರಕ್ತದಾನ ಮಾಡಿದ ವಿದ್ಯಾರ್ಥಿಗಳು

ದಾವಣಗೆರೆ.ಜು.೨೧; ರಕ್ತದಾನ ಶ್ರೇಷ್ಠ ದಾನ  ಎಂಬ ಉಕ್ತಿಯಂತೆ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಮ್ಮ ಅಮೂಲ್ಯ ರಕ್ತದಾನ ಮಾಡುವುದರ ಮೂಲಕ ರಕ್ತದ ಅವಶ್ಯಕತೆ ಇರುವ ರೋಗಿಗಳ ಪ್ರಾಣರಕ್ಷಣೆಗೆ ಪಣತೊಡಬೇಕೆಂದು ಶ್ರೀ ಸ್ವಾಮಿ ವಿವೇಕಾನಂದ ಸ್ವಯಂ ಪ್ರೇರಿತ ರಕ್ತದಾನ ಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ  ಚೇತನ್  ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಚಾಣುಕ್ಯ ಎಜುಕೇಷನ್ ಟ್ರಸ್ಟ್ ನಿಂದ ಆಯೋಜಿಸಿದ್ದ  ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿಯ ರಕ್ತದಾನದಿಂದ 3 ಅಮೂಲ್ಯ ಜೀವಗಳನ್ನು ಉಳಿಸಬಹುದು. ರಕ್ತದಾನವು ಸ್ವ ಆರೋಗ್ಯದ ರಕ್ಷಣಿ ಮಾಡುವುದಲ್ಲದೆ ರಕ್ತದಾನಿಯನ್ನು ಆರೋಗ್ಯಕರವಾಗಿಯು ಮತ್ತು ಉತ್ಸಹ ಭರಿತವಾಗಿ ಇರುವಂತೆ ಮಾಡುತ್ತದೆ.” ಎಂದು ಮಾಹಿತಿ ನೀಡಿದರು.ಕಾಲೇಜಿನ ಡೀನ್  ಬಿ.ಆರ್.ಟಿ ಸ್ವಾಮಿ ಮಾತನಾಡಿ “ ದಯವೇ ದರ್ಮದ ಮೂಲವಯ್ಯ ಎಂಬ ಬಸವಣ್ಣನವರ ನುಡಿಯಂತೆ ಸಮಾಜಸೇವೆಯ ಮೂಲಕ ಧರ್ಮದ ರಕ್ಷಣೆಗೆ ಯುವ ಜನಾಂಗವು ಮುಂದಾಗಬೇಕು. ಜನಸೇವೆಯೇ ಜನಾರ್ಧನ ಸೇವೆ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಡವರ ಮತ್ತು ಅಶಕ್ತರ ಕಲ್ಯಾಣಕ್ಕೆ ಕಂಕಣಬದ್ದರಾಗಬೇಕು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾರ್ಥಕತೆಗೆ ಕೊಂಡೊಯ್ಯಬೇಕೆಂದು” ಸಲಹೆ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಕು.ಸುಪ್ರಿತಾ ವಿ.ಹೆಚ್, ಕು.ಸ್ನೇಹ ಜಿ.ಎಸ್ ಪ್ರಾರ್ಥನೆಯನ್ನು ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ  ರಾಜಶೇಖರರ್ ಕೆ ಸ್ವಾಗತ, ಉಪನ್ಯಾಸಕಿಯದ ಶ್ರೀಮತಿ ಶಾಂತಲಾ ಪಿ.ಹೆಚ್ ರವರು ನಿರೂಪಣೆ ಮತ್ತು ಉಪನ್ಯಾಸಕರಾದ  ಅಮರೇಶ್ ಬಿ.ಎಸ್ ವಂದನಾರ್ಪಣೆ ಮಾಡಿದರು. ಈ ಶಿಬಿರದಲ್ಲಿ ರಕ್ತ ಗುಂಪು ತಪಾಸಣೆ, ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು 30 ಜನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ರಕ್ತದಾನ ಮಾಡಿದರು.