ರಕ್ತದಾನ ಜೀವ ಉಳಿಸಿದಂತಹ ಶ್ರೇಷ್ಠಕಾರ್ಯ


ಸಂಜೆವಾಣಿ ವಾರ್ತೆ
ಸಂಡೂರು: ಜು: 4 ರಕ್ತದಾನ ಶ್ರೇಷ್ಠದಾನ ಅಂತಹ ದಾನವನ್ನು ಮಾಡುವುದು ಮತ್ತೋಬ್ಬರ ಜೀವ ಉಳಿಸಿದಂತಹ ಶ್ರೇಷ್ಠಕಾರ್ಯ ದಾನಿಗಳಿಂದ ನಡೆಯುತ್ತದೆ, ಅದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ದಾನಿಗಳಾಗಿ, ಆರೋಗ್ಯವಂತರಾಗಿ ಎಂದು ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್ ಪೋರ್ಟ ಗಣಿ ಕಂಪನಿಯ ಎ.ಜಿ.ಎಂ. ಮಹೇಶ್ ತಿಳಿಸಿದರು.
ಅವರು ಪಟ್ಟಣದಲ್ಲಿ ಎಸ್.ಕೆ.ಎಂ.ಇ. ಗಣಿ ಕಂಪನಿ ಹಾಗೂ ಬಳ್ಳಾರಿಯ ವಿಮ್ಸ್ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಬಹಳಷ್ಟು ದಾನಗಳನ್ನು ನಾವು ಮಾಡುತ್ತೇವೆ, ಅದರೆ ನೇರವಾಗಿ ಸಂಕಷ್ಟದಲ್ಲಿರುವ ಜೀವಿಯ ಪ್ರಾಣವನ್ನು ಉಳಿಸುವಂತಹ ಶ್ರೇಷ್ಠದಾನ ರಕ್ತದಾನವಾಗಿದೆ, ಅಂತಹ ಸೇವಾ ಕಾರ್ಯವನ್ನು ಗಣಿ ಕಂಪನಿ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ, ಇಂತಹ ಕಾರ್ಯಗಳಿಂದ ಗಣಿಗಳಲ್ಲಿ, ರಸ್ತೆಗಳಲ್ಲಿ, ಕಾರ್ಮಿಕರು, ಬಾಣಂತಿಯರು ರಕ್ತಸ್ರಾವದಿಂದ ಸಂಕಷ್ಟಕ್ಕೆ ಗುರಿಯಾದ ಸಂದರ್ಭದಲ್ಲಿ ಅವರಿಗೆ ಅತಿ ಅಗತ್ಯವಾಗಿ ಬೇಕಾಗುವುದು ರಕ್ತ, ಅಂತಹ ದಾನವನ್ನು ನೀವು ಮಾಡುತ್ತಿದ್ದೀರಿ ಅದು ಹೆಮ್ಮೆಯ ವಿಷಯ, ಅದ್ದರಿಂದ ಆರೋಗ್ಯವಂತ ಯುವಕರು ರಕ್ತವನ್ನು ದಾನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಎಂ.ಇ. ಗಣಿ ಕಂಪನಿಯ ವ್ಯವಸ್ಥಾಪಕ ನಿಶಾಂತ ಅವರು ಮಾತನಾಡಿ ಇಂದು ನಮ್ಮ ಕಂಪನಿಯ 52 ಉದ್ಯೋಗಿಗಳು ಸ್ವಯಂ  ಪ್ರೇರಣೆಯಿಂದ ರಕ್ತವನ್ನು ದಾನಮಾಡಿದ್ದು ಹೆಮ್ಮೆಯ ಸಂಗತಿ, ರಕ್ತ ದಾನದಿಂದ ಆರೋಗ್ಯ ವೃದ್ದಿಯಾಗುತ್ತದೆ, ಆರೋಗ್ಯವಂತ ವ್ಯಕ್ತಿ ನೀಡಬಹುದು ಎಂದರು.
ಈ ಸಂದರ್ಭದಲ್ಲಿ ಕಂಪನಿಯ ಎಲ್ಲಾ ಸಿಬ್ಬಂದಿವರ್ಗದವರು, ಸಾರ್ವಜನಿಕರು, ವಿಮ್ಸ್ ಆಸ್ಪತ್ರೆಯ ರಕ್ತ ಸಂಗ್ರಹ ಕೇಂದ್ರದ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದು ಎಲ್ಲರನ್ನೂ ಪರೀಕ್ಷಿಸಿ ರಕ್ತ ಪಡೆದುಕೊಂಡರು.