ರಕ್ತದಾನ ಜೀವ ಉಳಿಸಲು ಸಹಕಾರಿ

ಭಾಲ್ಕಿ:ಆ.14: ರಕ್ತದಾನ ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ) ಅಧ್ಯಕ್ಷ ಸಂಗಮೇಶ ಗುಮ್ಮೆ ಹೇಳಿದರು.

ತಾಲೂಕಿನ ಬೀರಿ(ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 76ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಪಘಾತ ಮತ್ತು ರಕ್ತದ ಕೊರತೆ ಇರುವ ಜನರ ಆರೋಗ್ಯ ವೃದ್ಧಿಗೆ ರಕ್ತದಾನ ಪ್ರಯೋಜನ ಆಗಲಿದೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಆರೋಗ್ಯವಂತ ಯುವಕರು ಯಾವುದೇ ತಪ್ಪು ಕಲ್ಪನೆ ಇಟ್ಟುಕೊಳ್ಳದೇ ರಕ್ತದಾನ ಮಾಡಿದರೇ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ನೀಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಹಣಮಂತ ಕಾರಬಾರಿ, ಪ್ರಮುಖರಾದ ಮೇಘರಾಜ ಪಾಟೀಲ್, ಬಸವ ಕಾರಬಾರಿ, ಸಚಿನ ಸೋನಾಳೆ, ರವಿ ಬಿರಾದಾರ್, ಜಯರಾಜ ಅಚಿಗಾಂವೆ, ದೀಪಕ ಕಾರಬಾರಿ, ಪಪ್ಪು ಮಹಾರಾಜ್, ಶಿವಲಿಂಗ ಸ್ವಾಮಿ, ರಾಹುಲ, ಸಂದೀಪ ಬಿರಾದಾರ್, ಸೋಹಿಲ್ ಮಾಸಲ್ದಾರ್, ಪ್ರಶಾಂತ ಮೇತ್ರೆ, ಕುಟಲಿಂಗ ಕೋಟೆ, ಮಹಾದೇವ, ಡಾ.ಶಂಕರ ಜಾಧವ, ಸಿಬ್ಬಂದಿಗಳಾದ ಇಮಾನವೆಲ್, ಗಿರೀಶ್ ಸೇರಿದಂತೆ ಹಲವರು ಇದ್ದರು