ರಕ್ತದಾನ ಒಂದು ಶ್ರೇಷ್ಠ ಕಾರ್ಯ


ಧಾರವಾಡ,ಮೇ.18: ರಕ್ತದಾನ ಮಾಡುವುದು ಒಂದು ಶ್ರೇಷ್ಠವಾದ ಕೆಲಸ. ಜೀವನ್ಮರಣದ ಮದ್ಯೆ ಹೋರಾಡುತ್ತಿರುವ ವ್ಯಕ್ತಿಗೆ ರಕ್ತದಾನ ಮಾಡಿ ಅವರಿಗೆ ಮರುಜೀವ ನೀಡುವುದು ಒಂದು ಪುಣ್ಯದೆ ಕೆಲಸವೇ ಸರಿ. ರಕ್ತದಾನವು ಸ್ವಯಂಪ್ರೇರಣೆಯಿಂದ, ನೈತಿಕ ಉದ್ದೇಶಗಳಿಗಾಗಿ ರಕ್ತವನ್ನು ನೀಡುವ ಉದಾತ್ತ ಕಾರ್ಯವಾಗಿದೆ. ರಕ್ತವು ನಮ್ಮ ದೇಹಕ್ಕೆ ಅಗತ್ಯವಾದ ದ್ರವಗಳಲ್ಲಿ ಒಂದಾಗಿದೆ, ಇದು ದೇಹವು ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯ, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ರೆಡ್‍ಕ್ರಾಸ್ ಸಮೂಹದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಜೆ.ಎಸ್.ಎಸ್ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ರಕ್ತದಾನ ಮಾಡುವದರಿಂದ ಒಬ್ಬರ ಜೀವ ಉಳಿಸುವದರೊಂದಿಗೆ ನಾವು ಉತ್ತಮ ಆರೋಗ್ಯವನ್ನು ಸಹ ಪಡೆಯಬಹುದು. ರಕ್ತವನ್ನು ಕೆಂಪು ರಕ್ತ ಕಣಗಳು, ಪ್ಲೇಟ್ಲೆಟ್ಗಳು ಮತ್ತು ಪ್ಲಾಸ್ಮಾಗಳಾಗಿ ವಿಂಗಡಿಸಲಾಗಿದೆ. ಯಾವ ವ್ಯಕ್ತಿಗೆ ಯಾವ ಅಂಶದ ಅವಶ್ಯಕತೆ ಇದೆಯೋ ಅದನ್ನು ಮಾತ್ರ ವಿಂಗಡಿಸಿ ಅವರ ದೇಹ ಸೇರ್ಪಡಿಸಲಾಗುತ್ತದೆ. ಹರೆಯದ ಯುವಕ-ಯುವತಿಯರಲ್ಲಿ ರಕ್ತ ಉತ್ಪಾದನೆ ಪ್ರಮಾಣ ಅತಿ ಹೆಚ್ಚು ಹಾಗೂ ವೇಗವಾಗಿರುತ್ತದೆ. ಯುವಕ ಯುವತಿಯರು ಯಾವುದೇ ಹಿಂಜರಿಕೆ ಇಲ್ಲದೇ ರಕ್ತದಾನಕ್ಕೆ ಮುಂದಾಗಿ ಮತ್ತೋಬ್ಬರ ಜೀವಕ್ಕೆ ಜೀವನಾಡಿ ಆಗಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಡಿ.ಎಂ ರಕ್ತ ಭಂಡಾರದ ಡಾ. ಲಕ್ಷ್ಮೀದೇವಿ ಮಾತನಾಡಿ ರಕ್ತದಾನ ಮಾಡುವದರಿಂದ ಉಚಿತ ಸಣ್ಣ ಆರೋಗ್ಯ ಪರೀಕ್ಷೆ ಸಹ ಮಾಡಿಸಿದಂತಾಗುತ್ತದೆ. ದಾನ ಮಾಡುವ ಮೊದಲು ಸಾಮಾನ್ಯವಾಗಿ ರಕ್ತವನ್ನು ಪರೀಕ್ಷಿಸಲಾಗುತ್ತದೆ. ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿ ಪರೀಕ್ಷೆ ನಡೆಯಲಿದೆ. ಈ ಪ್ರಮುಖ ಮಾಹಿತಿಯನ್ನು ರೆಡ್ ಕ್ರಾಸ್ ರಕ್ತದಾನ ಕೇಂದ್ರಗಳ ಮೂಲಕ ವ್ಯಕ್ತಿಯ ಆನ್ಲೈನ್ ದಾನಿಗಳ ಪೆÇ್ರಫೈಲ್ನಲ್ಲಿ ದಾಖಲಿಸಲಾಗುತ್ತದೆ. ಹೀಗಾಗಿ ನಿಮ್ಮ ಆರೋಗ್ಯ ಸ್ಥಿತಿಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಬಹುದು. ಕೋರೋನ ಸಂದರ್ಭದಿಂದಾಗಿ ರಕ್ತದಾನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ರಕ್ತದಾನ ಶಿಬಿರಗಳ ಮೂಲಕ ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಜೆ.ಎಸ್.ಎಸ್ ಬನಶಂಕರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ವೈ ಜಯಮ್ಮ ಅಧ್ಯಕ್ಷೀಯಪರ ನುಡಿಗಳನ್ನಾಡಿ ವರ್ಷಕ್ಕೆ 5 ರಿಂದ 6 ಬಾರಿ ರಕ್ತದಾನ ಶಿಬಿರಗಳನ್ನು ನಮ್ಮ ಜನತಾ ಶಿಕ್ಷಣ ಸಮಿತಿಯ ವತಿಯಿಂದ ಮಾಡಲಾಗುತ್ತಿದ್ದು, ಯುವಕ ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಯುತ ರಕ್ತವನ್ನು ದಾನ ಮಾಡಿ ಮತ್ತೊಬ್ಬರ ಜೀವನ ಬೆಳಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಪ್ರಾರಂಭದಲ್ಲಿ ಡಾ. ಸೂರಜ್ ಜೈನ ಪ್ರಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಕು. ವಸಂತ ನಿರೂಪಿಸಿದರು. ಕು. ದವಲಾಭಿ ವಂದಿಸಿದರು. ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ಡಾ. ಜ್ಯೋತಿ ಅಕ್ಕಿ, ಡಾ. ಚೈತನ್ಯ ಕಿತ್ತೂರ, ಟಿ.ಎಂ ಶ್ರೀಧರ, ಡಾ. ಶಿಲ್ಪಾ ದಾನಪ್ಪಗೌಡರ, ಮಂಜುನಾಥ ಪಿ.ಜಿ ಇತರರು ಉಪಸ್ಥಿತರಿದ್ದರು.