ರಕ್ತದಾನ ಎಂಬುದು ಅತಿ ಮಹತ್ವವಾದದು :ಕೆಂಭಾವಿ ಶ್ರೀಗಳು

ಕೆಂಭಾವಿ:ನ.28: ಅನೇಕ ತುರ್ತು ಸಂದರ್ಭದಲ್ಲಿ ರಕ್ತದಾನದವು ಅತಿಅವಶ್ಯವಾಗಿರುತ್ತದೆ
ಎಲ್ಲಕ್ಕಿಂತಲೂ ರಕ್ತದಾನ ಎಂಬುವುದು ಶ್ರೇಷ್ಠವಾದುದು. ಯುವಕರು ಸೇರಿದಂತೆ ಪ್ರತಿಯೊಬ್ಬರೂ ರಕ್ತದಾನದಲ್ಲಿ ಭಾಗಿಯಾಗಬೇಕು ಎಂದು ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು ಕರೆ ನೀಡಿದರು.
ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಫ್ರೇಂಡ್ಸ್ ಯೂನಿಟಿ ಮ್ಯಾಗೇರಿ ವತಿಯಿಂದ ಸೋಮವಾರ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮ್ಯಾಗೇರಿಯ ಯುವಕರು ತಮ್ಮಲ್ಲಿಯೆ ಗೆಳೆಯರ ಬಳಗ ಮಾಡಿಕೊಂಡು ಪಟ್ಟಣಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದ್ದಾರೆ. ಈ ಯುವಕರ ಒಗ್ಗಟ್ಟಿನಿಂದಲೆ ಪ್ರತಿದಿನ ಸಾಯಂಕಾಲ ಪುರಾಣ ಕಾರ್ಯಕ್ರಮ ಜರಗುತ್ತಿದೆ. ಯುವಕರು ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂದು ಮ್ಯಾಗೇರಿಯ ಫ್ರೆಂಡ್ಸ್ ಯೂನಿಟಿ ಮಾಡಿ ತೊರಿಸಿದೆ ಎಂದು ಶ್ಲಾಘಿಸಿದರು.
ಮಾಳಹಳ್ಳಿಯ ಪೂಜ್ಯ ಕೆಂಚರಾಯ ಅವರು ಮಾತನಾಡಿ, ದುಶ್ಚಟಗಳಿಂದ ಯುವಕರು ಬಲಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಮ್ಯಾಗೇರಿಯ ಯುವಕರು ಸತ್ಕರ್ಯಗಳನ್ನು ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ. ಯಾರ ಹತ್ತಿರವೂ ಸಹಾಯಕ್ಕೆ ಅಂಗಲಾಚದೆ ತಮ್ಮಂದಿಲೆ ಇಂತಹ ಕಾರ್ಯಕ್ಕೆ ಮುಂದಾಗಿರುವದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ನಂದಿ ಶಿಕ್ಷಣ ಸಂಸ್ಥೆಯ ಕಾರ್ಯದಲ್ಲಿಗಳಾದ ಡಿ.ಸಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸಾಹೇಬಗೌಡ ಹೂಗಾರ, ಡಾ.ರವಿ ಅಂಗಡಿ, ನಾಗರಾಜ ಶಾಸ್ತ್ರಿ, ಯಮನಪ್ಪ ಕುಂಬಾರ,
ಬಸವರಾಜ ಕುಂಬಾರ ,ಶರಣು ತೋಟದ .ಸಿದ್ದು ಮ್ಯಾಗೇರಿ
ಸೇರಿದಂತೆ ಪಟ್ಟಣದ ಪ್ರಮುಖರಿದ್ದರು.
ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು. ವೀರೇಶ ಭಜಂತ್ರಿ ಸ್ವಾಗತಿಸಿದರು. ಶಶಿ ಮ್ಯಾಗೇರಿ ವಂದಿಸಿದರು. ಶಿಬಿರದಲ್ಲಿ ಸುಮಾರು 75 ಜನರು ರಕ್ತದಾನ ಮಾಡಿದರು.