ರಕ್ತದಾನ ಇನ್ನೋಬ್ಬರ ಜೀವದಾನ ಮಾಡಿದಂತೆ:ವಿಜಯಸಿಂಗ್

ತಾಳಿಕೋಟೆ:ಅ.18: ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನವಾದ ಪ್ರಕ್ರಿಯೆ, ರಕ್ತದಾನದಿಂದ ಸ್ವಯಂಚಾಲಿತ ರಕ್ತ ಉತ್ಪತ್ತಿಯಾಗುತ್ತದೆ ಮತ್ತು ಇನ್ನೋಬ್ಬರ ಜೀವ ಉಳಿಸಿದ ಶ್ರೇಯಸ್ಸು, ಪುಣ್ಯ ಲಭಿಸಲಿದೆ ಎಂದು ರಜಪೂತ ಸಮಾಜದ ಯುವ ಮುಖಂಡ ಪುರಸಭಾ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ ಅವರು ಹೇಳಿದರು.
ಪಟ್ಟಣದ ರಜಪೂತ ಸಮಾಜದ ಬಡಾವಣೆಯಲ್ಲಿ ನವರಾತ್ರೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾದ ಶ್ರೀ ನಾಡದೇವಿಯ ಪ್ರತಿಷ್ಠಾಪನಾ ಸ್ಥಳದ ಶ್ರೀ ಅಂಬಾಭವಾನಿ ಮಂದಿರದಲ್ಲಿ ರಜಪೂತ ಸಮಾಜ ಹಾಗೂ ದಸರಾ ಉತ್ಸವ ಸಮಿತಿ ಮತ್ತು ವಿಜಯಪುರದ ಶ್ರೀ ಸಿದ್ದೇಶ್ವರ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಭಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಬಹಳಷ್ಟು ಕೆಲಸ ಮಾಡುತ್ತಿದೆ, ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ, ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆಯಾಗಲೇಬೇಕಾಗಿದೆ ಎಂದರು.
ರಕ್ತದಾನಕ್ಕೆ ಯುವಕರು ಮುಂದಾಗಬೇಕು ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಇನ್ನೋರ್ವ ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ, ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ, ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ ಎಂದರು.
ಈ ರಕ್ತದಾನ ಶಿಭಿರದಲ್ಲಿ ಒಟ್ಟು 75 ಜನ ರಕ್ತದಾನ ಮಾಡಿದರು.
ರಕ್ತದಾನ ಶಿಬಿರ ಪ್ರಾರಂಭಕ್ಕೂ ಮುಂಚೆ ಶ್ರೀ ಅಂಬಾಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ರಘುರಾಮಸಿಂಗ್ ಹಜೇರಿ, ಬಾಬು ಹಜೇರಿ, ಗೋವಿಂದಸಿಂಗ್ ಗೌಡಗೇರಿ, ರಮೇಶ ಗೌಡಗೇರಿ, ಸುರೇಶಕುಮಾರ ಹಜೇರಿ, ಅರುಣ ದಡೇದ, ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕರಾದ ರವಿ ಕೋಟ್ಯಾಳ, ಶ್ರೀಶೈಲ ತಡಲಗಿ, ಹಾಗೂ ಬಸ್ ಘಟಕದ ಅಧಿಕಾರಿ ರಮೇಶ ತಾಳಿಕೋಟೆ, ಗಂಗು ಕೊಕಟನೂರ, ಅಲೌಕ ಗೌಡಗೇರಿ, ಹರೀಷ ಮೂಲಿಮನಿ, ವೇದಾಂತ ಗೌಡಗೇರಿ, ರಾಕೇಶ ನರಗುಂದ, ಸೂಹನ್ ಹಜೇರಿ, ನೀಕೀಲ್ ಮೂಲಿಮನಿ, ಸುಮೀತ್ ವಿಜಾಪೂರ, ಸುನೀಲ್ ವಿಜಾಪೂರ, ರಾಹುಲ್ ಮೂಲಿಮನಿ, ನವಿನ್ ಗೌಡಗೇರಿ, ವಿಠ್ಠಲ ಹಜೇರಿ, ಕನ್ನಯ್ಯ ವಿಜಾಪೂರ, ಪೃಥ್ವಿ ಹಜೇರಿ, ವಿನಾಯಕ ವಿಜಾಪೂರ, ಸುರಜ ಕೊಕಟನೂರ, ಪಂಕಜ ಕೊಕಟನೂರ, ಸಂದೀಪ ರಜಪೂತ, ಮೊದಲಾದವರು ಉಪಸ್ಥಿತರಿದ್ದರು.