
ಮೈಸೂರು,ಜು.27:- ರಕ್ತದಾನ ಮಾಡುವ ಜನರು ಹೃದಯಾಘಾತ ಮತ್ತು ಕ್ಯಾನ್ಸರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಕಾರಣ ಕಾಲಕಾಲಕ್ಕೆ ರಕ್ತದಾನ ಮಾಡುವುದರಿಂದ ಅವರ ರಕ್ತವು ರಕ್ತನಾಳಗಳ ಒಳಪದರಕ್ಕೆ ಕಡಿಮೆ ಹಾನಿಯಾಗುವ ರೀತಿಯಲ್ಲಿ ಹರಿಯುತ್ತದೆ ಮತ್ತು ಕಡಿಮೆ ಅಪಧಮನಿಯ ಅಡೆತಡೆಗಳನ್ನು ಉಂಟುಮಾಡುತ್ತದೆ. ರಕ್ತದಾನವು ಅತ್ಯಂತ ಪವಿತ್ರವಾದ ಕಾರ್ಯವಾಗಿದ್ದು, ರಕ್ತದಾನದಿಂದ ಜೀವ ಉಳಿಸಲು ಸಾಧ್ಯ' ಎಂದು ರಕ್ತನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಪೂಜಾ ಹೇಳಿದರು. ಟಿಟಿಎಲ್ ಟ್ರಸ್ಟ್ ಹಾಗೂ ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ಮತ್ತು ಟಿಟಿಎಲ್ ಸ್ವತಂತ್ರ ಪದವಿಪೂರ್ವ ಕಾಲೇಜು ಟಿಟಿಎಲ್ ಕಾಲೇಜು ಸಂಸ್ಥಾಪಕರ ದಿನದ ಪ್ರಯುಕ್ತ ರಕ್ತ ಗುಂಪು ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸರಸ್ವತಿಪುರಂನಲ್ಲಿರುವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಅಪಘಾತ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಮರು ಜೀವ ನೀಡಿದಂತಾಗುತ್ತದೆ. ಅನ್ನದಾನಕ್ಕಿಂತ ರಕ್ತದಾನವು ಶ್ರೇಷ್ಠವಾಗಿದೆ. ಉತ್ತಮ ಹವ್ಯಾಸಗಳಿಂದ ಬಲಿಷ್ಠ ದೇಹ ಮತ್ತು ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಆರೋಗ್ಯಯುತವಾದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.
`ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ತುರ್ತು ಅವಘಡ, ಅಕಾಲಿಕ ಕಾಯಿಲೆಗಳಿಂದಾಗಿ ರಕ್ತದಾನದ ಅವಶ್ಯ ಬಹಳಷ್ಟಿದೆ. ಈ ಬಗ್ಗೆ ಸಾರ್ವಜನಿಕರು ಕೂಡ ಜಾಗೃತರಾಗಿ ಹೆಚ್ಚೆಚ್ಚು ರಕ್ತದಾನಕ್ಕೆ ಮುಂದಾಗಬೇಕು’ ಎಂದರು. 54 ಜನ ಯುವಕ ಯುವತಿಯರು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿಟಿಎಲ್ ಟ್ರಸ್ಟ್ ನ ಸಿ.ಇ.ಒ ಮತ್ತು ಉಪಾಧ್ಯಕ್ಷರದ ಚೇತನ್ ರಾಮ್ ದಾಸ್, ಟಿಟಿಎಲ್ ಟ್ರಸ್ಟ್ ಉಪಾಧ್ಯಕ್ಷರು ಪ್ರಕಾಶ್ ತೋಲಿಗೌಡ,ಜೀವಧಾರ ರಕ್ತನಿಧಿ ನಿರ್ದೇಶಕರಾದ ಗಿರೀಶ್, ಊಆಈಅ ಃಂಓಏ ಸಹಾಯ ಉಪಾಧ್ಯಕ್ಷರದ ಪೂರ್ಣಿಮಾ ಪೂಂಜ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಎಸ್.ಆರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭ್ರಮಾರಂಭ ಎಸ್ ಹಾಗೂ ಇನ್ನಿತರರು ಹಾಜರಿದ್ದರು.