ರಕ್ತದಾನಮಾಡಿ ಜೀವ ಉಳಿಸಿ: ಡಾ. ವಿಲಾಸ ಕನಸೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಮೇ.27: ರಕ್ತದಾನಮಾಡಿ ಇನ್ನೊಂದು ಜೀವ ಉಳಿಸಿ, ಪುಣ್ಯ ಕಟ್ಟಿಕೊಳ್ಳಿ ಎಂದು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟನ ಅಧ್ಯಕ್ಷ ಡಾ| ವಿಲಾಸ ಕನಸೆ ಹೇಳಿದರು.
ಪಟ್ಟಣದ ಖಂಡ್ರೆ ಗಲ್ಲಿ ಹತ್ತಿರದ ಪಾಟೀಲ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ ವತಿಯಿಂದ ರವಿವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವ ಉಳಿಸಬಹುದು. ಜೀವ ರಕ್ಷಕ ರಕ್ತದಾನ ಮಹಾದಾನವಾಗಿದೆ. ಹಣ, ಅನ್ನ, ಸೇರಿದಂತೆ ಹಲವಾರು ದಾನಗಳಲ್ಲಿಯೂ ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಕಾರಣ ಜೀವನವೇ ಇಲ್ಲದಮೇಲೆ ಬೇರೆ ದಾನ ಪಡೆದು ಫಲವೇನು. ಹೀಗಾಗಿ ಜೀವ ರಕ್ಷಕ ರಕ್ತದಾನ ಮಹಾದಾನವಾಗಿದೆ. ರಕ್ತದಾನ ಮಾಡಿ, ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಉಮಾಕಾಂತ ವಾರದ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಪ್ರತಿವರ್ಷ ರಕ್ತದಾನ ಶಿಬಿರ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ರಸಪ್ರಶ್ನೆ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಆಸನ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರ ಸೇವೆಯೇ ರೋಟರಿಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಡೈಮಂಡ್ ಗ್ರೂಪ್ ಆಫ್ ಇನ್ಸ್‍ಟಿಟ್ಯೂಟ್ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ| ವಸಂತ ಪವಾರ, ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳಬಗ್ಗೆ ಮಾತನಾಡಿದರು. ಡಾ| ಶಶಿಕಾಂತ ಭೂರೆ, ರೋಟರಿ ಕ್ಲಬ್‍ನ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದರು. ಇದೇವೇಳೆ ರಕ್ತದಾನ ಮಾಡಿದ ದಾನಿಗಳಿಗೆ ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ| ನಿತಿನ ಪಾಟೀಲ, ಡಾ| ಕವಿತಾ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಜಯರಾಜ ದಾಬಶೆಟ್ಟಿ, ಡಾ| ಸಂತೋಷ ಕಾಳೆ, ನ್ಯಾಯವಾದಿ ಸಾಗರ ನಾಯಿಕ, ಡಾ| ಅಮಿತ ಅಷ್ಟೂರೆ, ಉದ್ಯಮಿ ಯೋಗೇಶ ಅಷ್ಟೂರೆ, ಪ್ರಮುಖರಾದ ಸಂಜೀವ ಪಂಡರಗಿರೆ, ಡಾ| ವಿಕ್ರಮ ದೇವಪ್ಪ, ಡಾ| ಸಜ್ಜಲ್ ಬಳತೆ, ಪ್ರಾಂಶುಪಾಲ ಅಶೋಕ ರಾಜೋಳೆ, ನ್ಯಾಯವಾದಿ ಸೌರಭ ನಾಯಿಕ, ಬಸವಾ ಪಾಟೀಲ, ಬೀದರಿನ ಬ್ರಿಮ್ಸ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ| ಎಮ್.ಪಾಟೀಲ, ಶಾಂತಕುಮಾರ ಸಿರಗಾಪೂರೆ, ಡಾ| ಸುಪ್ರಿಯಾ ಪಾಟೀಲ, ಡಾ| ಪ್ರಭುಲಿಂಗ ಸ್ವಾಮಿ ಉಪಸ್ಥಿತರಿದ್ದರು.
ಸಾಗರ ನಾಯಿಕ ಸ್ವಾಗತಿಸಿದರು. ಉಮಾಕಾಂತ ವಾರದ ನಿರೂಪಿಸಿದರು. ಪ್ರಭು ಬೆಳ್ಳೂರ ವಂದಿಸಿದರು.