ರಕ್ತದಾನದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ. ನ 2. ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಈ ಬಾರಿ ಕರವೇ ಸ್ವಾಭಿಮಾನಿ ಸೇನೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಲಯನ್ಸ್ ಸಂಸ್ಥೆ ರಕ್ತ ನಿಧಿ ಕೇಂದ್ರದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಲೋಕೇಶ್, ಹಾಗೂ ಅನೇಕ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ 67ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಜಯದೇವ ವೃತ್ತದಲ್ಲಿ ಆಚರಿಸಲಾಯಿತು. ರಾಜ್ಯ ಕಾರ್ಯದಕ್ಷರು ಎನ್ ಎಸ್ ಸುವರ್ಣಮ್ಮ, ಜಿಲ್ಲಾಧ್ಯಕ್ಷರು ಕೆ ಬಿ ರುದ್ರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಶ್ರೀಮತಿ ಅಂಬಿಕಾ ಚಂದ್ರಶೇಖರ್  ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ  ಜಿಲ್ಲೆಯ ಮಹಿಳಾ ಘಟಕದ ಕಾರ್ಯಕರ್ತರಾದ ಗಾಯಿತ್ರಮ್ಮ, ಚೌಡಮ್ಮ, ಕರಿಬಸಮ್ಮ, ನೀತು, ರೇಖಾ ಸಿಂಗ್, ಸುಧಾ, ಶಾರದಮ್ಮ, ಲಕ್ಷ್ಮಿ, ಸುಜತಮ್ಮ, ಸುನೀತಮ್ಮ ಹಾಗೂ ಪುರುಷ ಘಟಕದ ಪದಾಧಿಕಾರಿಗಳಾದ ಮಂಜುನಾಥ, ಅಶೋಕ್ ರೆಡ್ಡಿ, ಕಿರಣ್, ವಿಜಯ್, ಬಸವರಾಜ್, ಅಭಿಷೇಕ್, ರಮೇಶ್, ಹನುಮಂತ, ಅಜಯ್ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.