ರಕ್ತದಾನದಿಂದ ಹಲವು ಪ್ರಯೋಜನ: ಕನಿಕಾ ಸಿಕ್ರಿವಾಲ

ಕಲಬುರಗಿ:ಜೂ.17: ರಕ್ತದಾನದಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಸಮಾಜದ ಅರೋಗ್ಯ ಕಾಪಾಡಲು ಯುವ ಸಮುದಾಯ ಇಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಸಮಾಜದ ಅರೋಗ್ಯ ಕಾಪಾಡಬೇಕು ಎಂದು ನಗರ ಪೆÇಲೀಸ್ ಉಪ ಆಯುಕ್ತೆ ಕನಿಕಾ ಸಿಕ್ರಿವಾಲ ಹೇಳಿದರು.
ನಗರದ ಜವಹಾರ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಕಲಬುರಗಿ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ “ವಿಶ್ವ ರಕ್ತದಾನ ದಿನಾಚರಣೆ” ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲಿ ಆರೋಗ್ಯ ಸಂಬಂಧಿ ರೋಗಗಳು ಸಮುದಾಯವನ್ನು ಬಾದಿಸುತಿವೆ. ಕೆಲವು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಸಿಗದೆ ಸಾವುಗಳು ಸಂಭವಿಸಿವೆ. ಯುವ ಜನಾಂಗ ಆರೋಗ್ಯದ ಹಿತದೃಷ್ಠಿಯಿಂದ ರಕ್ತದಾನ ಮಾಡುವುದರಂದ ಅಸಹಾಯಕರು ಮತ್ತು ಕಡುಬಡವರಿಗೆ ನೆರವು ನೀಡಿದಂತಾಗುತ್ತದೆ. ರಕ್ತದಾನದಂತಹ ಪವಿತ್ರ ಸೇವೆ ಮತ್ತೊಂದಿಲ್ಲ ಎಂಬುದರ ಅರಿವು ಜನತೆಯಲ್ಲಿ ಮೂಡಿಸುವ ಇಂತಹ ಶಿಬಿರಗಳು ಹೆಚ್ಚು ಮಹತ್ವ ಪಡೆಯುತ್ತವೆ ಎಂದರು.
ಉಪನ್ಯಾಸಕ ಡಾ. ಪ್ರಕಾಶ್ ಬಡಿಗೇರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರು ರಕ್ತದಾನ ಶಿಬಿರಗಳಲ್ಲಿ ಭಾಗವಹಿಸುವ ಮಊಲಕ ರಕ್ತದಾನ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳ ಮಹತ್ವ ಮತ್ತು ಮೌಲ್ಯ ಹೆಚ್ಚಲಿದೆ. ಉತ್ತಮ ಆರೋಗ್ಯ ಸಮಾಜವನ್ನು ನಿರ್ಮಿಸಲು ಸ್ವಯಂ ಆಸಕ್ತಿಯಿಂದ ಸಮುದಾಯದ ಕಾಳಜಿ ಮತ್ತು ಸಹಭಾಗಿತ್ವ ಅತಿ ಅವಶ್ಯಕ ಎಂದರು.
ಕೌಲಗಿ ಆಸ್ಪತ್ರೆ ವೈದ್ಯ ಡಾ. ಬಸವರಾಜ ಕೌಜಲಗಿ, ಡಾ. ಸುಕನ್ಯಾ ಬಿ. ಕೌಲಗಿ, ಕಲಬುರಗಿ ಜಿಮ್ಸ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಜಗದೀಶ್ ಕಟ್ಟಿಮನಿ, ಮಹಾದೇವ ಮಠ, ಸಂಗಾನಂದ, ಮಹಾಂತೇಶ್ ಹಾಗೂ ಉಪಸ್ಥಿತರಿದ್ದರು. ರಾಜು ಡಾ. ನವೀನ್ ಕಾರಭಾರಿ, ಶರಣು ಗೌಡ, ರಾಜು ವರವಿ, ಅಶೋಕ ಬಡಿಗೇರ್, ಮಲ್ಲಿಕಾರ್ಜುನ ಬಡಿಗೇರ್, ಸುರೇಶ, ಶ್ಯಾಮ್, ಭೀಮನ ಗೌಡ ಮುಂತಾದವರಿದ್ದರು.
ತಮ್ಮ ರಕ್ತವನ್ನಾದರು ಕೊಟ್ಟು ಲೋಕ ಕಲ್ಯಾಣಕ್ಕಾಗಿ ನಾವು ಸದಾ ಸಿದ್ಧ ಎಂದು ಸಾರುವ ಭರವಸೆಯಯನ್ನು ನೀಡಿದ ರಾಜಶೇಖರ್ ಪೂಜಾರಿ ವರವಿ, ಮಲ್ಲಿಕಾರ್ಜುನ್ ಬಡಿಗೇರ್ ಹರನಾಳ, ಸುರೇಶ ಕಟ್ಟಿಮನಿ ಸೈದಾಪುರ, ಆಯುμÁ್ಮನ್ ಶ್ಯಾಮು ಸೈದಾಪುರ ಹಾಗೂ ಅಶೋಕ ಬಡಿಗೇರ್ ಹರನಾಳ ರವರು ರಕ್ತದಾನ ಮಾಡಿ ಮಾನವ ಸಂತತಿಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರು.