ರಕ್ತದಾನದಿಂದ ಸಾಮಾಜಿಕ ಜವಾಬ್ದಾರಿ:ಉಜ್ಜಿನಿಶ್ರೀ

ಕೊಟ್ಟೂರು, ನ.18: ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ಇನ್ನೊಬ್ಬರ ಜೀವನ ರಕ್ಷಿಸಲು ಸಹಾಯಕವಾಗಿರುವ ಈ ಕಾರ್ಯದಲ್ಲಿಯುವಕರು ಪಾಲ್ಗೊಳಬೇಕು ಎಂದು ಉಜ್ಜಿನಿ ಪೀಠದ ಸಿದ್ದಲಿಂಗ ರಾಜದೇಶಿ ಕೇಂದ್ರ ಮಹಸ್ವಾಮಿಗಳು ಹೇಳಿದರು.
ತಾಲೂಕಿನ ಉಜ್ಜಿನಿಪೀಠದಲ್ಲಿ ಸಿದ್ದಲಿಂಗ ಜಗದ್ಗುರುಗಳ ಹುಟ್ಟು ಹಬ್ಬದ ಅಂಗವಾಗಿ ಡಾ.ಸುರಗಿಮಠ ರಕ್ತನಿಧಿ ಕೇಂದ್ರ ಯಾದಗಿರಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಟ್ಟೂರೇಶ್ವರಸ್ವಾಮಿ ದೇವಾಲಯದ ಪ್ರಧಾನ ಧರ್ಮಕರ್ತ ಸಿ ಹೆಚ್.ಎಂ. ಗಂಗಧರಯ್ಯ, ಗುಳಿಗಿ ವಿರೇಂದ್ರ ಪಿಡಿಒ ಜಯಮ್ಮ,ಲೋಕಣ್ಣ ಸೇರಿದಂತೆ ಇತರರು ಇದ್ದರು.