ರಕ್ತದಾನದಿಂದ ಯುವಕರ ಜ್ಞಾನವೃದ್ಧಿ – ಎನ್ ಕಲ್ಲಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 21 :-  ರಕ್ತದಾನ ಮಾಡುವುದರಿಂದ  ಯುವಕರ ದೇಹದಲ್ಲಿ ದಿನದ 24ತಾಸಿನಲ್ಲೇ  ಮತ್ತೆ ಹೊಸ ರಕ್ತ ಸಂಚಾರ ಉತ್ಪತ್ತಿಯಾಗುವ ಜೊತೆಗೆ ಉತ್ತಮ  ಜ್ಞಾನರ್ಜನೆ ಸಹ ಬೆಳೆಯುತ್ತದೆ ಎಂದು ಕೂಡ್ಲಿಗಿ ಎಸ್ ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎನ್ ಕಲ್ಲಪ್ಪ ಕಾಲೇಜಿನ ವಿದ್ಯಾರ್ಥಿ ಯುವಸಮುದಾಯಕ್ಕೆ ಕಿವಿ ಮಾತು ಹೇಳಿದರು.
ಅವರು  ಪಟ್ಟಣದ ಎಸ್ ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಕಾಲೇಜಿನ ಎನ್ ಎಸ್ ಎಸ್ ಎ ಅಂಡ್ ಬಿ ಯೂನಿಟ್, ರೆಡ್ ಕ್ರಾಸ್ ಜಾಯಿಂಟ್ ಲಿ ಆರ್ಗಾನೈಸ್ಡ್ ಅವೆರನೆಸ್ ಪ್ರೋಗ್ರಾಮ್ ಇನ್ ಕೋಲಬರೇಷನ್ ವಿತ್, ಕೂಡ್ಲಿಗಿ ತಾಲೂಕು ಆಸ್ಪತ್ರೆ, ಆರೋಹಣ ಸೊಸೈಟಿ ರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆ ಕೂಡ್ಲಿಗಿ ಇವರ ಸಂಯುಕ್ತಾಶ್ರಯದಲ್ಲಿ ಹಗರಿಬೊಮ್ಮನಹಳ್ಳಿ ಶ್ರೀ ಸ್ವಾಮಿ ವಿವೇಕಾನಂದ ರಕ್ತಕೇಂದ್ರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ರಕ್ತಹೀನತೆ, ಅಪಘಾತದಲ್ಲಿ ರಕ್ತ ಕಳೆದುಕೊಂಡ ಅದೆಷ್ಟು ಜೀವಗಳು ನೀವು ನೀಡುವ ರಕ್ತದಾನದಿಂದ ಉಳಿಯುತ್ತವೆ ಅದರ ಪುಣ್ಯ ನಿಮಗೆ ಲಭಿಸಲಿದೆ ಎಂದು ಕಲ್ಲಪ್ಪ ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಕಾಲೇಜಿನ ಎನ್ ಎಸ್ ಎಸ್ ಶಿಬಿರಾಧಿಕಾರಿ ಹಾಗೂ ಉಪನ್ಯಾಸಕ ಮಂಜುನಾಥ ಮಾತನಾಡಿ ರಕ್ತದಾನ ಎಲ್ಲಾ ದನಗಳಿಗಿಂತಲೂ ಶ್ರೇಷ್ಠ ದಾನವಾಗಿದೆ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮಾನವೀಯ ಕಾಳಜಿ ಬೆಳೆಸಿಕೊಳ್ಳುವಂತೆ ಹಾಗೂ ರಕ್ತದಾನ ಮಾಡಿ  ಆರೋಗ್ಯವೃದ್ಧಿಸಿಕೊಳ್ಳುವಂತೆ ಯುವಸಮುದಾಯಕ್ಕೆ ಮಾನವೀಯ ಮೌಲ್ಯದ ಅರಿವು ನೀಡಿದರು.
ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯ ಐಸಿಟಿಸಿಯ ಆಪ್ತ ಸಮಾಲೋಚಕ ಕೆ ಪ್ರಶಾಂತಕುಮಾರ ಮಾತನಾಡಿ ರಕ್ತದಾನ ಕೊಡುವವರು ಆರೋಗ್ಯವಂತರಾಗಿರಬೇಕು, ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳೇನು ರಕ್ತದಾನ ಮಾಡುವುದರಿಂದ ಯಾವ್ಯಾವ ಕಾಯಿಲೆ ದೂರವಾಗುತ್ತವೆ ಮತ್ತು ಅನಾರೋಗ್ಯ ಪೀಡಿತರು, ಮದ್ಯವ್ಯಸನಿಗಳು ರಕ್ತದಾನ ಮಾಡಬಾರದು. ಒಬ್ಬ ಮನುಷ್ಯ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ರಕ್ತದಾನದ ಮಹತ್ವ ತಿಳಿಸಿದರು.
ಉಪನ್ಯಾಸಕರಾದ ಡಾ ಪ್ರಶಾಂತ, ಡಾ ಉಮೇಶ, ಡಾ ಗಾಯತ್ರಿ, ಡಾ ಬೊಮ್ಮಯ್ಯ, ಡಾ ಭೀಮಲಿಂಗ, ಕಾವ್ಯ, ನಿಂಗಪ್ಪ ಕಮ್ಮತಿ, ಪರಸಪ್ಪ, ಗುರುಬಸವರಾಜ ಹಾಗೂ ಭೋಧಕೇತರ ವರ್ಗದವರು ಇದ್ದರು.
ವಿದ್ಯಾರ್ಥಿಗಳಾದ ದಿವ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪ್ರಿಯದರ್ಶಿನಿ ಸ್ವಾಗತಿಸಿದರು,ಅಭಿಲಾಶ ನಿರೂಪಿಸಿ ವಂದಿಸಿದರು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ  ರಕ್ತದಾನ ಮಾಡಿದರೆ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತಗುಂಪಿನ ಪರೀಕ್ಷೆ ಮಾಡಿಸಿಕೊಂಡರು.