ರಕ್ತದಾನದಿಂದ ಒಂದು ಜೀವ ಉಳಿಸಿದಂತಾಗುತ್ತದೆ

ಆನೇಕಲ್.ಮೇ೨೧:ರಕ್ತದಾನ ಮಹಾದಾನ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು. ರಕ್ತದಾನದಿಂದ ಒಂದು ಜೀವ ಉಳಿಸಿ ದಂತಾಗುತ್ತದೆ ಎಂದು ಶಾಸಕ ಬಿ.ಶಿವಣ್ಣ ರವರು ತಿಳಿಸಿದರು.
ಅವರು ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷ ಸಿಂಗೇನ ಅಗ್ರಹಾರ ಗೌರೀಶ್ ರವರ ಹುಟ್ಟು ಹಬ್ಬ ಅಂಗವಾಗಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನದ ಬಗ್ಗೆ ಕೆಲವೊಂದು ಮೂಢನಂಬಿಕೆಗಳಿವೆ. ಪ್ರತಿಯೊಬ್ಬರೂ ಇಂಥ ಮೂಢ ನಂಬಿಕೆಗಳಿಂದ ಹೊರಬಂದು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಪುಣ್ಯ ಲಭಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ನಮಗೂ ಉತ್ತಮ ಆರೋಗ್ಯ ಭಾಗ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನಕ್ಕೆ ಮುಂದೆ ಬರಬೇಕು ಎಂದರು. ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರ ಸಂಖ್ಯೆ ಬಹಳ ವಿರಳವಾಗಿದೆ ಆದರೆ ಸಿಂಗೇನ ಅಗ್ರಹಾರ ಗೌರೀಶ್ ರವರು ಕಳೆದ ಹತ್ತಾರು ವರ್ಷಗಳಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಇವರ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಂಡು ಸ್ವಾಸ್ಥ ಸಮಾಜ ಕಟ್ಟುವ ನಿಟ್ಟಿನಲ್ಲಿ ಮುಂದೆ ಬರಬೇಕಿದೆ ಎಂದು ಕಿವಿ ಮಾತು ಹೇಳಿದರು.
ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷ ಸಿಂಗೇನ ಅಗ್ರಹಾರ ಗೌರೀಶ್ ಮಾತನಾಡಿ ಉಚಿತ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವುದರಿಂದ ಬಡ-ದುರ್ಬಲ ಜನರಿಗೆ ಹಾಗೂ ಸಮಾಜಕ್ಕೆ ತುಂಬಾ ಉಪಕಾರವಾಗುತ್ತದೆ ಈ ನಿಟ್ಟಿನಲ್ಲಿ ನನ್ನ ಹುಟ್ಟು ಹಬ್ಬ ನಾಲ್ಕು ಜನರಿಗೆ ಸಹಾಯವಾಗಬೇಕು ಎಂಬುವ ಉದ್ದೇಶದಿಂದ ಈ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶ್ರೀಮಂತರು ಸಮಾಜದ ಉದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಮಾಜಿಕ ಅಸಮಾನತೆ ತೊಡೆದು ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಇಂತಹ ಕಾರ್ಯ ಜರುಗಬೇಕಾದರೆ ಯುವ ಜನತೆ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಗುಡ್ಡಹಟ್ಟಿ ರಾಮಸ್ವಾಮಿ. ಚಂದಾಪುರ ಶ್ರೀಧರ್, ಮುತ್ತಾನಲ್ಲೂರು ಶ್ರೀನಿವಾಸರೆಡ್ಡಿ. ಜಯರಾಂ ಸರ್ಜಾ, ಬಳಗಾರನಹಳ್ಳಿ ಕುಮಾರ್, ಬಿ.ಎಂ.ಆರ್. ರಾಮಚಂದ್ರ, ಸಿಂಗೇನ ಅಗ್ರಹಾರ ಹರೀಶ್. ಅನಂದ್. ಸತ್ಯ. ಮುನಿರಾಜು. ಮದು. ವೇಣು. ಶಿವಶಂಕರ್. ಮಂಜು. ಆಟೋ ಕೃಷ್ಣಪ್ಪ. ಮುನಿಯಲ್ಲಪ್ಪ. ವೆಂಕಟೇಶ್. ಸುರೇಶ್. ನಾಗೇಶ್. ಸಂತೋಷ್, ದೇವರಾಜ್ ನಾಯಕ್, ಲಿಂಗಣ್ಣ, ಕಾಂತರಾಜ್ ಮತ್ತು ಗೌರೀಶಣ್ಣ ಅಭಿಮಾನಿ ಬಳಗದವರು ಹಾಗೂ ವೈದ್ಯರು, ಗ್ರಾಮಸ್ಥರು ಬಾಗವಹಿಸಿದ್ದರು.