ರಕ್ತದಾನದಿಂದ  ಆರೋಗ್ಯ ರಕ್ಷಣೆ 

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೨೦ :-  ರಕ್ತದಾನ ಮಾಡುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಎ.ಡಿ.ಬಿ. ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ  ಕೋರಿ ವಿರೂಪಾಕ್ಷಪ್ಪ ತಿಳಿಸಿದರು ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮತ್ತು ರಕ್ತ ತಪಾಸಣೆ ಕಾರ್ಯಕ್ರಮ ಏರ್ಪಡಿಸಿದ್ದು ಸುಮಾರು ಮೂವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಎಲ್ಲಾ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಹಾಗೂ ರಕ್ತ ತಪಾಸಣೆಯಲ್ಲಿ ಪಾಲ್ಗೊಂಡರು. ಹಗರಿಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ಮುಖ್ಯಸ್ಥ ಸಿ ಜಿ ಗೋಪಾಲರೆಡ್ಡಿ ಹಾಗೂ ತಂಡದವರು ರಕ್ತದಾನದ ಎಲ್ಲಾ ವಿದ್ಯಾರ್ಥಿಗಳ ರಕ್ತ ತಪಾಸಣೆಗೂ ಅವಕಾಶ ಕಲ್ಪಿಸಿದರು ಸ್ವತಹ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ  ಕೋರಿ ವಿರೂಪಾಕ್ಷಪ್ಪ ರಕ್ತದಾನ ಮಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು ಅಂತೆಯೇ ಕೆಲವು ಅಧ್ಯಾಪಕರು ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಆರೋಗ್ಯ ತಪಾಸಣೆಯಲ್ಲಿ ಡಾ. ಗುರುರಾಜ್ ಡಾ. ಸುಷ್ಮಾ ಮತ್ತು ಆಪ್ತ ಸಮಾಲೋಚಕರಾದ ಶ್ರೀಮತಿ ಅಂಜು, ಕುಮಾರಿ ಚಂದನ ಪಾಲ್ಗೊಂಡು ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಾರ್ಯ ನಡೆಸಿದರು ವಿವಿ ಸಂಘದ ಅಜೀವ ಸದಸ್ಯರಾದ  ಕರಿಬಸಪ್ಪ ಹಾಗೂ ಕಾಲೇಜು ಪ್ರಾಚಾರ್ಯರಾದ ಡಾ. ಎಸ್ ಎಂ ಸಿದ್ದಲಿಂಗ ಮೂರ್ತಿ ಎನ್ಎಸ್ಎಸ್ ಅಧಿಕಾರಿಗಳು ಬೋಧಕ ಸಿಬ್ಬಂದಿಯವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.