ರಕ್ತದಾನಕ್ಕೆ ಮನವಿ

ಕೆ.ಆರ್.ಪುರ, ಮಾ.೨೪- ಕೋವಿಡ್ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡವಂತೆ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ವಿ.ಪ್ರಶಾಂತ್ ರೆಡ್ಡಿ ಮನವಿ ಮಾಡಿದರು.
ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮಂಡಲ ಕಾಡುಗುಡಿ ವಾರ್ಡ್ ಯುವ ಮೋರ್ಚಾ ವತಿಯಿಂದ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕಛೇರಿಯಲ್ಲಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಬಲಿದಾನ ದಿನದ ಅಂಗವಾಗಿ ಪ್ರಶಾಂತ್ ಫೌಂಡೇಶನ್ ಹಾಗೂ ಲಯನ್ಸ್ ರಕ್ತ ನಿಧಿ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಮತ್ತು ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಚಿತ ಕಣ್ಣಿನ ತಪಾಸಣೆ ಸಹ ಆಯೋಜಿಸಲಾಗಿದ್ದು, ಅಗತ್ಯವಿದ್ದವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಾಂತರ ಅಧ್ಯಕ್ಷ ನಟರಾಜ್, ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರಾದ ವೀರಸ್ವಾಮಿರೆಡ್ಡಿ, ಬೆಂಗಳೂರು ಕೇಂದ್ರ ಯುವಮೋರ್ಚಾ ಅಧ್ಯಕ್ಷ ಆಭಿಲಾಷ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕ್ಷೇತ್ರದ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷ ರಾಮಮೂರ್ತಿ, ವಾಡ್೯ನ ಅಧ್ಯಕ್ಷ ಅರವಿಂದ ಬಾಬು, ಆಯೋಜಕ ಯುವಮೋರ್ಚಾ ಅಧ್ಯಕ್ಷ ಲಿಖಿತ್ ಜೈ ಸಿಂಗ್, ಮುಖಂಡರಾದ ಹೂಡಿ ವಿಜಿ, ವಾಣಿ, ಅನಿಲ್, ನಿಶಾಂತ್ ಇದ್ದರು.