ರಂಭಾಪುರಿ ಶ್ರೀಗಳು ಲಿಂಗಾಯತ ಒಳ ಪಂಗಡಗಳಿಗೆಮೀಸಲಾತಿ ಕಲ್ಪಿಸಲು ಮುಂದಾಳತ್ವ ವಹಿಸಲಿ:ಸಚಿವ ಎಂ.ಬಿ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.4:ಸಮುದಾಯದ ಸವಾರ್ಂಗೀಣ ಏಳಿಗೆಗಾಗಿ ಪಂಚಪೀಠಗಳು ಮತ್ತು ವಿರಕ್ತಮಠಗಳು ಸೇರಿಕೊಂಡು ಲಿಂಗಾಯತ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಮೀಸಲಾತಿ ಪಡೆಯುವಂತಾಗಬೇಕು. ಇದಕ್ಕೆ ರಂಭಾಪುರಿ ಜಗದ್ಗುರುಗಳು ನೇತೃತ್ವ ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರಜಿಲ್ಲೆಯ ಬಸವನ ಬಾಗೇವಾಡಿತಾಲೂಕಿನ ಮನಗೂಳಿಯಲ್ಲಿ ಶನಿವಾರ ಸಂಸ್ಥಾನ ಹಿರೇಮಠ ಆಯೋಜಿಸಿದ್ದ ಶತಾಯುಷಿ ಶ್ರೀ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ ಹಾಗೂ ಉಭಯ ಶ್ರೀಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ಸಂಗನಬಸವ ಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಧರ್ಮ ಸಭೆಯಲ್ಲಿ ಪಾಲ್ಗೋಂಡ ಸಚಿವರು, ಭಕ್ತರ ದೈವಅಭಿನವ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದರು.
ಪಂಚಪೀಠಗಳು ಮತ್ತು ವಿರಕ್ತಮಠಗಳು ಲೋಪದೋಷಗಳನ್ನು ಸರಿಪಡಿಸಲು ಲಿಂಗಾಯಿತ ಸಮುದಾಯದ ಉಪಪಂಗಡಗಳನ್ನು ಒಗ್ಗೂಡಿಸಬೇಕು. ಎಲ್ಲ ಉಪಪಂಗಡಗಳಿಗೆ ರಾಜ್ಯದಲ್ಲಿ 2ಎ ಮತು ಕೇಂದ್ರದಲ್ಲಿ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಯ ಪಡೆಯಬೇಕು. ಎಲ್ಲ ಉಪಪಂಗಡಗಳನ್ನು ಒಂದೇ ಸೂರಿನಲ್ಲಿ ಸೇರಿಸದಿದ್ದರೆ ಅನ್ಯಾಯವಾಗುತ್ತವೆ. ಇದರಲ್ಲಿ ಯಾವ ಪ್ರತಿμÉ್ಠಯೂ ಇಲ್ಲ. ರಂಭಾಪುರಿ ಶ್ರೀಗಳು ನೇರ, ಸ್ಪಷ್ಡ ನುಡಿಗಳಿಂದ ನಮ್ಮೆಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಕಾರಣರಾಗಿದ್ದಾರೆ. ಶ್ರೀಗಳು ನೇತೃತ್ವ ವಹಿಸಿಕೊಂಡು ಮುಂದಡಿ ಇಡದಿದ್ದರೆ ಸಮಾಜದ ಶಕ್ತಿ ಕಡಿಮೆಯಾಗಲಿದೆ. ಈಗ ಎಲ್ಲ ಉಪಪಂಗಡಗಳನ್ನು ಸೇರಿಸಿದರೆ ರಾಜ್ಯz Àಒಟ್ಟುಜನಸಂಖ್ಯೆಯಲ್ಲಿ ಲಿಂಗಾಯಿತರ ಶೇ. ಶೇ. 17 ರಷ್ಟಿದ್ದಾರೆ. ನಾನಾ ಕಾರಣಗಳಿಂದ ಬಿಟ್ಟು ಹೋಗಿರುವ ಪ್ರತಿಯೊಂದು ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿದರೆ ಈ ಪ್ರಮಾಣ ಶೇ. 30ಕ್ಕೆರಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಕೆಲಸವಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ರಂಭಾಪುರ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಮತ್ತು ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗೌರವಿಸಿದರು. ಉಭಯ ಶ್ರೀಗಳು ಸಚಿವ ಎಂ. ಬಿ. ಪಾಟೀಲ ಅವರನ್ನು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಜಾಲಹಳ್ಳಿ ಬೃಹನ್ಮಠದ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಮಹಾಸ್ವಾಮಿಗಳು, ನಾಗಠಾಣ ಉದಯೇಶ್ವರ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಆಲಮೇಲ ಹಿರೇಮಠದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ, ಮಾಜಿ ಶಾಸಕ ಮನೋಹರ ಐನಾಪುರ, ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಮಾಜಿ ಸದಸ್ಯ ಚಂದ್ರಶೇಖರಗೌಡ ಪಾಟೀಲ, ಮುಖಂಡರಾದ ಸಂಗಮೇಶ ಬಬಲೇಶ್ವರ, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ ಮುಂತಾದವರು ಉಪಸ್ಥಿತರಿದ್ದರು.