ರಂಭಾಪುರಿ ಪೀಠಕ್ಕೆ ಯಾತ್ರಾರ್ಥಿಗಳ ನಿಷೇಧ ಬಾಳೆ

ಹೊನ್ನೂರು.ಏ.೨೩: ಕೊರೊನಾ ಸೋಂಕಿನ 2ನೇ ಅಲೆ ರಾಜ್ಯದಲ್ಲಿ ಪ್ರಬಲವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದನ್ವಯ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ನಿಷೇಧ ಹೇರಲಾಗಿದೆ.  ಶ್ರೀ ಪೀಠದಲ್ಲಿ ಸಾಂಪ್ರದಾಯಿಕ ಪೂಜೆಗಳು ಮಾತ್ರ ನಡೆಯುತ್ತಿದ್ದು ದೈವ ದರ್ಶನ, ಪ್ರಸಾದದ ವ್ಯವಸ್ಥೆ ಮತ್ತು ವಾಸ್ತವ್ಯದ ಕೊಠಡಿಗಳ ವ್ಯವಸ್ಥೆಯನ್ನು ಮುಂದಿನ ಪ್ರಕಟಣೆವರೆಗೆ ನಿಷೇಧಿಸಲಾಗಿದೆ. ಕೋವಿಡ್-19ರ 2ನೇ ಅಲೆಯ ತೀವ್ರತೆಯನ್ನು ಗಮನಿಸಿ ಭಕ್ತಾದಿಗಳು ಶ್ರೀ ಪೀಠಕ್ಕೆ ಆಗಮಿಸಬಾರದು ಮತ್ತು ಈ ದಿಶೆಯಲ್ಲಿ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.