ರಂಭಾಪುರಿ ಜಗದ್ಗುರುಗಳಿಂದ ಕ್ಯಾಲೆಂಡರ್ ಬಿಡುಗಡೆ

ಬೀದರ್:ಜ.9: ನಾಡಿನ ಹೆಮ್ಮೆಯ ಹಾಗೂ ಸಮೃದ್ಧಿ ದಿನಪತ್ರಿಕೆಯಾದ ಕಳೆದ ನಾಲ್ಕು ದಶಕಗಳಿಂದ ನಾಡಿನ ಮನೆ ಮಾತಾಗಿರುವ ಸಂಜೆವಾಣಿ ದಿನಪತ್ರಿಕೆಯಾದ ಸಂಜೆವಾಣಿ ದಿನಪತ್ರಿಕೆ-2023ನೇ ಸಾಲಿನಲ್ಲಿ ಬೀದರ್ ಜಿಲ್ಲೆಯಿಂದ ಹೊರ ತರಲಾದ ಪಂಚಾಂಗ ಸಹೀತ ದಿನದರ್ಷಿಕೆಯನ್ನು ಬೀದರ್ ನಗರದ ಹೊರ ವಲಯದಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಭಾನುವಾರ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಪಂಚಾಚಾರ್ಯ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ, ಸದಸ್ಯರಾದ ಕಾರ್ತಿಕ ಸ್ವಾಮಿ ಮಠಪತಿ, ಬೀದರ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ.ಚನ್ನಬಸಪ್ಪ ಹಾಲಹಳ್ಳಿ, ಪ್ರಮುಖರಾದ ಕಲಬುರಗಿಯ ಶಿವಶರಣಪ್ಪ ಸೀರಿ, ಮಹೇಶ್ವರ ಸ್ವಾಮಿ, ಸಂಗಮೇಶ ಸ್ವಾಮಿ, ಶಿಲ್ಪಾ ಮಠಪತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.