ರಂಜಿತಾಗೆ ಬಂಗಾರದ ಪದಕ


ಬ್ಯಾಡಗಿ,ಜೂ.16: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಎಮ್‍ಎಸ್ಸಿ (ಕೃಷಿ) (ಅಗ್ರಿ) ಪದವಿಯಲ್ಲಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ರಂಜಿತಾ ಜಂಬುನಾಥ್ ಹಂಚಿನಮನಿ ಇವರಿಗೆ ಬಂಗಾರದ ಪದಕ (ಗೋಲ್ಡ್ ಮೆಡಲ್) ಲಭಿಸಿದೆ.
ಇತ್ತೀಚೆಗೆ ಧಾರವಾಡ ಕೃಷಿ ವಿವಿ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ಕೃಷಿಸಚಿವ ಚೆಲುವರಾಯಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಿದರು. ಬೀಜವಿಜ್ಞಾನ ಹಾಗೂ ತಂತ್ರಜ್ಞಾನಶಾಸ್ತ್ರದಲ್ಲಿ ಎಮ್‍ಎಸ್ಸಿ ಕೃಷಿಪದವಿ ಪಡೆದಿರುವ ಇವರು ಕಳೆದ 2021-22 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದರು.
ರಂಜಿತಾ ಅವರ ಸಾಧನೆಗೆ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜು ಬಳ್ಳಾರಿ ಇನ್ನಿತರರು ಅಭಿನಂದಿಸಿದ್ದಾರೆ.