
ತಾಳಿಕೋಟೆ:ಮಾ.27: ನನ್ನ ರಾಜಕೀಯ ಜೀವನದಲ್ಲಿ ನಾನು ಯಾವುದೇ ಧರ್ಮವನ್ನಾಗಲಿ ಮತ್ತು ಮುಸ್ಲಿಂ ಸಮಾಜ ಬಂದುಗಳನ್ನು ನಾನೆಂದೂ ವೆತ್ಯಾಸ ಮಾಡದೇ ಜೊತೆಗೆ ಕರೆದುಕೊಂಡು ಹೋಗುವಂತಹ ಕೆಲಸ ಮಾಡಿದ್ದೇನೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.
ಶನಿವಾರರಂದು ರಂಜಾನ ಹಬ್ಬದ ನಿಮಿತ್ಯ ಕಾಯಪಲ್ಲೆ ಮಾರ್ಕೇಟ್ ಆವರಣದಲ್ಲಿ ಶಾಸಕ ನಡಹಳ್ಳಿ ಕುಟುಂಭದ ವತಿಯಿಂದ ಮುಸ್ಲಿಂ ಸಮಾಜ ಬಾಂದವರಿಗಾಗಿ ಆಯೋಜಿಸಲಾದ ಇಪ್ತಿಯಾರಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ರಂಜಾನ ಮಾಸ ಅತ್ಯಂತ ಪವಿತ್ರವಾದ ಮಾಸವಾಗಿದೆ ಇಡೀ ತಿಂಗಳು ಉಪವಾಸವೃತವನ್ನು ಆಚರಿಸಿ ದೇವರಲ್ಲಿ ಪ್ರಾರ್ಥಿಸುವಂತಹ ಕೆಲಸ ಈ ಮಾಸದಲ್ಲಿ ನಡೆಯುತ್ತದೆ ಮುಸ್ಲಿಂ ಸಮಾಜದ ಪ್ರತಿ ಹಬ್ಬಗಳಲ್ಲಿಯೂ ಅವರ ಸಮಾಜದ ಬಂದುಗಳೊಂದಿಗೆ ಬೆರೆತು ಹಬ್ಬವನ್ನು ಆಚರಿಸಿ ಅವರ ಪ್ರೀತಿ ವಿಸ್ವಾಸವನ್ನು ಕಂಡಿದ್ದೇನೆ ರಂಜಾನ ಹಬ್ಬದ ಸಂದರ್ಬದಲ್ಲಿ ನಾನು ಕೇಳುವದಿಷ್ಟೇ ನಿಮ್ಮ ಪ್ರೀತಿ ವಿಸ್ವಾಸ ನನ್ನ ಮೇಲೆ ಹೀಗೆ ಇರಲಿ ಎಂದು ಬಯಸುತ್ತೇನೆಂದ ಅವರು ನಾನು ಎಲ್ಲಯವರೆಗೂ ರಾಜಕೀಯ ಜೀವನದಲ್ಲಿ ಇರುತ್ತೇನೆ ಎಲ್ಲಿಯವರೆಗೆ ನನ್ನ ಬಧುಕಿನಲ್ಲಿರುತ್ತೇನೆ ಅಲ್ಲಿಯವರೆಗೂ ನಾನು ಮುಸ್ಲಿಂ ಸಮೂದಾಯವನ್ನು ನನ್ನ ಸ್ವಾರ್ಥಕ್ಕಾಗಲಿ ಅಥವಾ ನನ್ನ ರಾಜಕೀಯ ಉದ್ದೇಶಕ್ಕಾಗಲಿ ವಿರೋಧಿಸುವಂತಹ ಕೆಲಸ ಮಾಡುವದಿಲ್ಲಾವೆಂದು ಸ್ಪಷ್ಟವಾಗಿ ಹೇಳುತ್ತೇನೆಂದರು.
ಪ್ರತಿನಿತ್ಯ ಮುಸ್ಲಿಂ ಸಮೂದಾಯದ ಬಂದುಗಳು ದೇವರ ದ್ಯಾನ ಮಾಡುತ್ತಾ ಈ ಪವಿತ್ರವಾದ ರಂಜಾನ ಮಾಸದಲ್ಲಿ ತೊಡಗುವ ಎಲ್ಲರಿಗೂ ಅಲ್ಲಾನು ಒಳ್ಳೆಯದು ಮಾಡಲಿ ಹೊಸ ಚೈತನ್ಯ ಉಂಟಾಗಲಿ ಹೊಸತನ ನಿಮ್ಮ ಕುಟುಂಭದಲ್ಲಿ ಮೂಡಲಿ ಎಂದ ಅವರು ನಾನು ನಿಮ್ಮವನಾಗಿದ್ದೇನೆ ರಾಜಕೀಯವಾಗಿ ಬೇರೆ ಬೇರೆ ಸಂದರ್ಬದಲ್ಲಿ ಬೇರೆ ಬೇರೆ ಪಕ್ಷದಿಂದ ನಾನು ನಿಂತಿರಬಹುದು ವ್ಯಕ್ತಿಗತವಾಗಿ ಸದಾ ನಿಮ್ಮ ಜೊತೆ ನಿಲ್ಲುತ್ತೇನೆ ಪ್ರೀತಿಸುತ್ತೇನೆ ಗೌರವಿಸುತ್ತೇನೆ ನಾನು ಯಾವತ್ತು ಮುಸ್ಲಿಂ ಸಮಾಜದ ಬಂದುಗಳನ್ನು ಬಿಟ್ಟು ರಾಜಕೀಯ ಜೀವನವಿರಬಹುದು ನನ್ನ ಬಧುಕಿನ ಜೀವನ ವಿರಬಹುದು ನಿಮ್ಮನ್ನು ಬೇರ್ಪಡಿಸಿ ಬಧುಕನ್ನು ಅಳವಡಿಸಿಕೊಂಡಿಲ್ಲಾ ಹೀಗಾಗಿ ಅನೇಕ ಭಾರಿ ಸಾದ್ಯವಾದಗಲ್ಲೆಲ್ಲ ನಿಮ್ಮ ಜೊತೆ ಸೇರಿ ಪ್ರೀತಿ ವಿಸ್ವಾಸ ಹಂಚಿಕೊಳ್ಳುವಂತಹ ಕೆಲಸ ಮಾಡಿದ್ದೇನೆಂದರು.
ಮುಸ್ಲಿಂ ಸಮಾಜದ ಮುಖಂಡರಾದ ಅಬ್ದುಲ್‍ರಜಾಕ ಮನಗೂಳಿ ಅವರು ಮಾತನಾಡಿ ರಂಜಾನ್ ಮಾಸದ ಪವಿತ್ರದಿನದಲ್ಲಿ ಪ್ರತಿವರ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮುಸ್ಲಿಂಬಾಂದವರಿಗಾಗಿ ಇಪ್ತಿಯಾರಕೂಟವನ್ನು ಆಯೋಜಿಸಿ ಸರಳತೆಯನ್ನು ಮೆರೆಯುತ್ತಾ ಬಂದಿದ್ದಾರೆ ಅವರು ಯಾವುದೇ ಸಮಯದಲ್ಲಿಯೂ ಜಾತಿ ಜಾತಿಗಳನ್ನು ಹಾಗೂ ಧರ್ಮ ಧರ್ಮಗಳನ್ನು ಬೇರ್ಪಡಿಸಿ ರಾಜಕಾರಣ ಮಾಡಿದವರಲ್ಲ ಎಲ್ಲ ಧರ್ಮಿಯರನ್ನು ಜೊತೆಗೂಡಿಸಿಕೊಂಡು ಹೊರಟವರಾಗಿದ್ದಾರೆ ಸುಮಾರು 15 ವರ್ಷಗಳಿಂದಲೂ ಎಲ್ಲ ಸಮಾಜದವಂತೆ ಮುಸ್ಲಿಂಬಾಂದವರಿಗೂ ಸಾಕಷ್ಟು ಸಹಾಯವನ್ನು ಮಾಡುತ್ತಾ ಬಂದಿದ್ದಾರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಗೆ ಆರ್ಥಿಕ ನೆರವು ನೀಡಿದ್ದಾರೆ ಉಚಿತ ನೋಟಬುಕ್ ಪಠ್ಯಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ ಅವರ ಮನೆಗೆ ಸಹಾಯಕ್ಕಾಗಿ ಹೋದವರಿಗೆ ಯಾವತ್ತೂ ಬರೆಗೈಯಿಂದ ಕಳುಹಿಸಿಲ್ಲಾ ಇಂತಹ ಸರಳ ಸಜ್ಜನಿಕೆಉಳ್ಳ ರಾಜಕಾರಣಿ ನಮಗೆ ಸಿಕ್ಕಿರುವದು ಪುಣ್ಯವಾಗಿದೆ ಅವರ ಬೆನ್ನೇಲುಭಾಗಿ ನಿಲ್ಲುವದರೊಂದಿಗೆ ಸಮಾಜಕ್ಕೆ ಇನ್ನಷ್ಟು ಸೇವೆ ಅಪೇಕ್ಷೇಸೋಣವೆಂದರು.
ಇದೇ ಸಮಯದಲ್ಲಿ ಮುಸ್ಲಿಂ ಸಮಾಜ ಬಾಂದವರಿಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯ ಮೇಲೆ ಮುಸ್ಲಿಂ ಸಮಾಜದ ಮುಖಂಡರುಗಳಾದ ಮಾಸುಮಸಾಬ ಕೇಂಭಾವಿ, ಖಾಜಾಹುಸೇನ ಡೋಣಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಗೈಬುಸಾಬ ಮಕಾಂದಾರ, ರಫೀಕ ಬೇಪಾರಿ, ಮೈನು ಬೇಪಾರಿ, ಮೈಹಿಬೂಬಸಾಬ ಮುದ್ನಾಳ, ಗನಿಸಾಬ ಲಾಹೋರಿ, ಮಂಜೂರ ಬೇಪಾರಿ, ವಾಸುದೇವ ಹೆಬಸೂರ, ಡಿ.ಕೆ.ಪಾಟೀಲ, ರಾಮನಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮ ಕರೆಗೆ ಅವಾಜ್ ಆಗಿ ನಿಲ್ಲುತ್ತೇನೆ
ನಿವು ಯಾವಾಗ ಕರೆ ಕೊಡುತ್ತೀರಿ ನಾನು ನಿಮ್ಮ ಅವಾಜಗೆ ಅವಾಜ್ ಆಗಿ ನಿಲ್ಲುತ್ತೇನೆ ನಾನು ಯಾವು ಮಾತುಗಳನ್ನು ಕೊಟ್ಟಿದ್ದೇನೆ ಆ ಮಾತುಗಳನ್ನು ಕಂಡಿತವಾಗಿಯೂ ಇಡೇರಿಸುತ್ತೇನೆಂದರು. ಬರುವ ದಿನಗಳಲ್ಲಿ ಮುಸ್ಲಿಂ ಸಮಾಜ ಬಾಂದವರ ಸಾರ್ವಜನಿಕ ಯಾವ ಕೆಲಸಗಳು ಆಗಬೇಕಿದೆ ಪಟ್ಟಿ ಮಾಡಿಕೊಡಿ ನಾನು ವಿಸ್ವಾಸದಿಂದ ಹೇಳುತ್ತೇನೆ ನಿವು ನನ್ನಜೊತೆ ನಿಲ್ಲಿ ಮುಂದಿನ 5 ವರ್ಷಗಳಲ್ಲಿ ಎಲ್ಲ ಬೇಡಿಕೆಗಳನ್ನು ಇಡೇರಿಸುತ್ತೇನೆ.
ಊಟಬಡಿಸಿ ಸರಳತೆ ಮೇರೆದ ನಡಹಳ್ಳಿ
ರಂಜಾನ್ ಮಾಸದ ನಿಮಿತ್ಯ ತಾಳಿಕೋಟೆ ಪಟ್ಟಣದ ಕಾಯಪಲ್ಲೆ ಮಾರುಕಟ್ಟೆ ಆವರಣದಲ್ಲಿ ಶಾಸಕ ನಡಹಳ್ಳಿ ಕುಟುಂಭದಿಂದ ಆಯೋಜಿಸಲಾದ ಇಪ್ತಿಯಾರಕೂಟದಲ್ಲಿ ಅತ್ಯಂತ ಪ್ರೀತಿಯಿಂದ ಮುಸ್ಲಿಂಬಾಂದವರಿಗೆ ಊಟಬಡಿಸುವದರೊಂದಿಗೆ ಸರಳತೆ ಮೇರೆದರಲ್ಲದೇ ಅವರ ಜೊತೆಗೂಡಿ ಊಟ ಮಾಡುವದರೊಂದಿಗೆ ಭಾವೈಕ್ಯತೆಗೆ ಸಾಕ್ಷೀಕರಿಸಿದ್ದು ಎದ್ದು ಕಾಣುತ್ತಿತ್ತು.