ವಿಜಯಪುರ:ಎ.22: ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ(ರಿ) ಹಾಗೂ ಬಿಜಾಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ), ವಿಜಯಪುರ ಇವರ ಸಹಯೋಗದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಅಂತರಧರ್ಮಿಯ ಸಂವಾದ ಹಾಗೂ ಇಪ್ತಾರ್ ಕೂಟ ನಗರದ ಸಂತ ಅನ್ನಮ್ಮನವರ ದೇವಾಯದ ಸಬಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮೊದಲಿಗೆ ಸಂವಿಧಾನ ಪೀಠಿಕೆಯ ಪ್ರಸ್ತಾವನೆ ಓದುವ ಮೂಲಕ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಮುಸ್ಲಿಂ ಧರ್ಮಗುರುಗಳಾದ ಪರಮ ಪೂಜ್ಯ ಡಾ|| ಸೈಯದ ಎಫ್. ಎಚ್. ಇನಾಮದಾರ ಸೈಯದ ಶಾಹಾ ಹುಸೇನಿಪೀರ ಖಾದ್ರಿ ಚಿಪ್ತಿ ಸುಕ್ಷೇತ್ರ ಮನಗೂಳಿ ಇವರು ಮಾತನಾಡುತ್ತಾ, ನಮ್ಮ ದೇಶ ಪ್ರಜಾಪ್ರಭುತ್ವ ದೇಶ ಇಲ್ಲಿ ಹಲವಾರು ಜಾತಿ, ಮತ, ಪಂಗಡಗಳು ವಾಸಿಸುತ್ತಿದ್ದು ಶುಭ ಅಶುಭ ಕಾರ್ಯಕ್ರಮಗಳಲ್ಲಿ ಒಬ್ಬರಿಗೊಬ್ಬರು ಸೇರಿಕೂಂಡು ಜೀವನ ನಡೆಸುತ್ತಿರುವುದೇ ಅಂತರಧರ್ಮಿಯ ಜೀವನ. ಹಿಂದು ಬಾಂಧವರಿಗೆ ಶ್ರಾವಣ ಮಾಸ ಪವಿತ್ರವಾದರೆ, ಮುಸ್ಲಿಂ ಬಾಂಧವರಿಗೆ ರಂಜಾನ ಮಾಸ ಹಾಗೆಯೇ ಕ್ರೈಸ್ಥ ಬಾಂಧವರು ಸಹ ಒಂದು ತಿಂಗಳ ಉಪವಾಸ ಮಾಡಿ ಗುಡ್‍ಪ್ರೈಡೆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಪ್ರತಿಯೊಂದು ಧರ್ಮ ಸತ್ಯ, ಶಾಂತಿಯನ್ನು ಬಯಸುತ್ತದೆ. ಹೀಗಾಗಿ ನಮ್ಮ ದೇಶ ಶಾಂತಿಯ ಹೂ ತೋಟ. ಹೇಗೆ ಹೂ ತೋಟದಲ್ಲಿ ಬಣ್ಣ ಬಣ್ಣದ ಹೂಗಳು ಇವೆ, ಹಾಗೆ ನಮ್ಮ ದೇಶದಲ್ಲಿ ನೂರಾರು ಜಾತಿ ಪಂಗಡಳು ಇವೆ. ರಂಜಾನ ಒಂದು ತಿಂಗಳು ಅಲ್ಲಾಹನು ಹೇಳುವ ಸಂದೇಶ ಮನುಜರೆ ಪಾಪದಿಂದ ಮುಕ್ತರಾಗಿ, ಬೇರೆಯವರಿಗೆ ಅನ್ಯಾಯ ಮಾಡಬೇಡಿ ಬಡವರಿಗೆ, ಅಶಕ್ತರಿಗೆ, ದೀನ ದಲಿತರಿಗೆ, ಸಹಾಯ ಹಸ್ತಚಾಚಿ ಪರರಿಗೂ ಹಾಗೂ ತಾವುಗಳು ಸ್ವಯಂ ಆಗಿ ಪ್ರೀತಿ, ವಿಶ್ವಾಸ, ಸಂತೋಷದಿಂದ ಇರಿ ಎಂದು ವಾಣಿಯಲ್ಲಿ ಹೇಳುತ್ತಾರೆ. ಆದ್ದರಿಂದ ಒಂದು ತಿಂಗಳವರೆಗೆ ಉಪವಾಸ ಮಾಡುತ್ತಾರೆ. ಇವತ್ತಿನ ದಿನ ರಂಜಾನ ಪ್ರಯುಕ್ತ ಅಂತರಧರ್ಮಿಯ ಇಪ್ತಾರ್ ಕೂಟ ಹಮ್ಮಿಕೊಂಡಿದ್ದು, ನಾವೆಲ್ಲರು ಒಂದೇ ಎಂಬ ಸಂದೇಶವನ್ನು ನೀಡುತ್ತದೆಂದು ತಿಳಿಸಿದರು. ಸಂಗೀತಾ ಅಕ್ಕ ರಾಜಯೋಗಿನಿ ಬ್ರಹ್ಮಕುಮಾರಿ ಸಂಸ್ಥೆ, ಮತ್ತು ಪರಮಪೂಜ್ಯ ಫಾದರ ಪ್ರಾನ್ಸಿಸ್ ಮೆನೆಜಸ್ ಮುಖ್ಯಸ್ಥರು, ಜೆಸ್ವಿಟ್ ಸಂಸ್ಥೆಗಳು ವಿಜಯಪುರ ಇವರು ಸಹ ನಾವೆಲ್ಲರು ಭಾರತೀಯರು, ಭಾರತ ಪ್ರಜಾಪ್ರಭುತ್ವ ದೇಶ ನಾವೆಲ್ಲರು ಅಣ್ಣ ತಮ್ಮಂದಿರ ಹಾಗೆ ಬಾಳೋಣ ಎಂದು ಸಂದೇಶವನ್ನು ನೀಡಿದರು.
ಈ ಕಾರ್ಯಕ್ರಮದ ಪ್ರಾಸ್ಥಾವಿಕವಾಗಿ ಫಾದರ ಟಿಯೋಲ ಮಚಾದೊ ನಿರ್ದೇಶಕರು, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಇವರು ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ರಂ ಮಾಶ್ಯಾಳಕರ, ಅಧ್ಯಕ್ಷರು ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ರಾಜೇಶ್ವರಿ ಮಠಪತಿ ಅಧ್ಯಕ್ಷರು ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ದೇಸಾಯಿ ರಾರೋಡ, ಡಾ||ಬಾಬಾ ಸಾಹೇಬ ಅಂಬೇಡ್ಕರ ಟಾಟಾ ಏಸ್ ವಾಹನ ಚಾಲಕರ ಯೂನಿಯನ್, ಪರ್ಜಾನ ಜಮಾದಾರ ಅಧ್ಯಕ್ಷರು, ಗೃಹ ಕಾರ್ಮಿಕರ ಯೂನಿಯನ್, ಕುಮಾರಿ ವಂದನಾ ಗೆಜ್ಜಗೆ ಅಧ್ಯಕ್ಷರು ಯುವತಿಯರ ಸಂಘಗಳ ಒಕ್ಕೂಟ, ಸಿದ್ದು ಹೊನಕಟ್ಟಿ, ಅಧ್ಯಕ್ಷರು, ಕಟ್ಟಡ ಕಾರ್ಮಿಕರ ಯೂನಿಯನ್, ಉಮೇಶ ರುದ್ರಮುನಿ, ಅಧ್ಯಕ್ಷರು, ಮಹಾತ್ಮಾ ಗಾಂಧಿ ಆಟೋಚಾಲಕರ ಯೂನಿಯನ್, ಸೋಮನಾಥ ಬಾಂಡೇಕರ ಅಧ್ಯಕ್ಷರು, ಯುವಕ ಸಂಘಗಳ ಒಕ್ಕೂಟ, ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು ಮತ್ತು ನಗರದ ವಿವಿಧ ಸ್ಲಂಗಳಿಂದ ಮತ್ತು ಸ್ವ-ಸಹಾಯ ಸಂಘಳಿಂದ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಎದ್ದೇಳು ಕರ್ನಾಟಕದ ಸದಸ್ಯರು ಹೀಗೆ 200 ಜನರು ಇಫ್ತಾರ್ ಕೂಟದಲ್ಲಿ ಪಾಲಗೊಂಡು ಇಫ್ತಾರ್ ಮತ್ತು ಪ್ರಾರ್ಥನೆ (ನಮಾಜ) ಮಾಡಿದರು. ನಂತರ ಪ್ರೀತಿಯ ಭೋಜನ ಮಾಡಿದರು ಕವಿತಾ ಚವ್ಹಾಣ ಸ್ವಾಗತಿಸಿದರು. ರವಿ ದೊಡಮನಿ ನಿರೂಪಿಸಿದರು, ಮುತ್ತು ಭೋವಿ ವಂದಿಸಿದರು.