ರಂಜಾನ ಆಚರಣೆ ಮುಸ್ಲಿಂ ಬಾಂಧವರಿಗೆ ಇಫ್ತಾರ ಕೂಟ

ಆಳಂದ: ಎ.15:ಪಟ್ಟಣದ ಹತ್ತ್ಯಾನಗಲಿ ಬಳಿಯ ನೌಕಾಡಗಲ್ಲಿಯ ಮುಸ್ಲಿಂ ಬಾಂಧವರಿಗೆ ರಂಜಾನ್ ಆಚರಣೆ ಪ್ರಯುಕ್ತ ಶುಕ್ರವಾರ ತಾಲೂಕು ವೀರಶೈವ ಲಿಂಗಾಯತ್ ಸಮಾಜದ ಕಾರ್ಯದರ್ಶಿ ರೇವಣಸಿದ್ಧಪ್ಪ ಎಸ್. ನಾಗೂರೆ ಅವರು 11ನೇ ವರ್ಷದ ಇಫ್ತಾರ ಕೂಟವನ್ನು ಏರ್ಪಡಿಸಿ ಪರಸ್ಪರ ಸೌಹಾದರ್ತೆ ಮೆರೆದರು.
ಈ ಸಂದರ್ಭದಲ್ಲಿ ಲಿಂಗಾಯತ್ ಬಾಂಧವರು ಹಾಗೂ ಮುಸ್ಲಿಂ ಬಾಂಧವರನ್ನು ಸನ್ಮಾನಿಸಿದ ನಾಗೂರೆ ಅವರು. ಎರಡೂ ಸಮುದಾಯದ ಮುಖಂಡರು ಸೇರಿ ಅಲೈಕಟ್ಟೆಯಲ್ಲಿನ ಸಮಾದಿಗೆ ಚಾದರ ಹೊದಿಸಿ ಪುಷ್ಪಾರ್ಚನೆ ಕೈಗೊಂಡರು. ಬಳಿಕ ನೂರಾರು ಮಂದಿ ಸೇರಿ ಸಾಮೂಹಿಕವಾಗಿ ಹಣ್ಣು-ಹಂಫಲ ಹಾಗೂ ಭೋಜನ ಸವಿಸಿದು ಹೃದಯ ಸ್ಪರ್ಶಿಸಿಕೊಂಡು ಶುಭ ಕೋರಿದರು.
ರೇವಣಸಿದ್ಧಪ್ಪ ನಾಗೂರೆ, ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಗುರಶರಣ ಪಾಟೀಲ ಕೊರಳ್ಳಿ, ಶಂಕರರಾವ್ ದೇಶಮುಖ, ಮಲ್ಲಪ್ಪ ಹತ್ತರಕಿ, ವಿಎಸ್‍ಎಸ್‍ಎಸ್ ಮಾಜಿ ಅಧ್ಯಕ್ಷ ಶಂಕರರಾವ್ ಹತ್ತಿ, ಶಿವುಕುಮಾರ ನಿಪ್ಪಾಣಿ, ಹಣಮಂತರಾವ್ ಪಾಟೀಲ, ದಿನೇಶ ಪಾಟೀಲ, ಬಸವರಾಜ ಪಾಟೀಲ, ಶಿವಾ ನಾಗೂರೆ ಮತ್ತಿತರು ಆಗಮಿಸಿದ್ದರು.
ಮÀುುಸ್ಲಿಂ ಧಾರ್ಮಿಕ ಮುಖಂಡರು ಒಳಗೊಂಡು ಹಿರಿಯ ಪಾಶಾ ಗುತ್ತೇದಾರ, ಅಹ್ಮದ ಅಲಿ ಚುಲಬುಲ್, ಗುಲಾಮ ಹುಸೇನ ಟಪ್ಪೇವಾಲೆ, ಆಸೀಫ್ ಅನ್ಸಾರಿ, ಅಬ್ದುಲ ಸತಾರ ಮುರಮಕರ್, ಮುನ್ನಾ ಅಡಿಗೆ, ಮೌಲಾಲಿ ಖಾದರ, ಅಲೀಂ, ಅಜಗರಲಿ ಹವಾಲ್ದಾರ, ತೈಯಬ ಶೇಖ ಸೇರಿದಂತೆ ಮಕ್ಕಳು ಯುವಕರು ಹಿರಿಯರು ಉಪಸ್ಥಿತರಿದ್ದರು.