ರಂಜಾನ್ ಹಬ್ಬ ಸೌಹಾರ್ದತೆಯ ಸಂಕೇತವಾಗಿದೆ:ಅಸ್ಕಿ

ತಾಳಿಕೋಟೆ:ಎ.14: ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಂರಿಗೆ ಪವಿತ್ರ ತಿಂಗಳಾಗಿದ್ದು ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ. ಅಲ್ಲದೇ ಇದು ಸೌಹಾರ್ದತೆ ಬೆಸೆಯುವ ಸಂಕೇತವಾಗಿದೆ ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಮಾಜ ಸೇವಕ ಸಿ.ಬಿ.ಅಸ್ಕಿ(ಕೊಣ್ಣೂರ) ಅವರು ಹೇಳಿದರು.

ಪಟ್ಟಣದ ಕಾಯಪಲ್ಲೆ ಮಾರುಕಟ್ಟೆ ಆವರಣದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂದವರಿಗಾಗಿ ಅಸ್ಕಿ ಪೌಂಡೇಶನ್ ವತಿಯಿಂದ ಆಯೋಜಿಸಲಾದ ಇಪ್ತಿಯಾರ ಕೂಟ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮುಸ್ಲಿಂ ಬಾಂದವರಿಂದ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಹಬ್ಬ ಹರಿದಿನಗಳು ಪರಸ್ಪರ ಬಾಂದವ್ಯ ಬೆಸೆಯುವಂತವುಗಳಾಗಿವೆ ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲಸಲಿದೆ ಎಂದ ಅವರು ತಿಂಗಳ ಪರ್ಯಂತ ಮುಸ್ಲಿಂ ಬಾಂದವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವದರೊಂದಿಗೆ ಆಚರಿಸುವ ಪವಿತ್ರ ರಂಜಾನ್ ಹಬ್ಬದಲ್ಲಿ ಕಾಮ, ಕ್ರೋದ, ಮದ, ಮಸ್ತರ ಎಲ್ಲವನ್ನು ತೆಜಿಸಿ ಸಾಮರಸ್ಯದ ಬಧುಕನ್ನು ನಡೆಸಲು ಮುಂದಾಗುತ್ತಾರೆ ಅಂತಹ ಪವಿತ್ರ ಹಬ್ಬದಲ್ಲಿ ಉಪವಾಸ ವೃತ ಕೈಗೊಂಡ ಮುಸ್ಲಿಂ ಬಾಂದವರಿಗೆ ಪ್ರತಿವರ್ಷವೂ ಕೊಣ್ಣೂರ ಗ್ರಾಮದಲ್ಲಿ ಇಪ್ತಿಯಾರ(ಭೋಜನ)ಕೂಟವನ್ನು ಅಸ್ಕಿ ಪೌಂಡೇಶನ್ ವತಿಯಿಂದ ಆಯೋಜಿಸುತ್ತಾ ಬರಲಾಗಿದೆ ಈ ಇಪ್ತಿಯಾರ ಕೂಟವನ್ನು ತಾಲೂಕಿನಾಧ್ಯಂತ ವಿಸ್ತರಿಸಬೇಕೆಂಬ ಇಚ್ಚೆಯೊಂದಿಗೆ ಮುದ್ದೇಬಿಹಾಳ, ನಾಲತವಾಡ, ತಾಳಿಕೋಟೆ ಪಟ್ಟಣದಲ್ಲಿ ಹಮ್ಮಿಕೊಳ್ಳುತ್ತಾ ಬರಲಾಗಿದೆ ಇಂತಹ ಇಪ್ತಿಯಾರ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಲಿದೆ, ಆಯೋಜಿಸಲಾಗಿರುವ ಇಪ್ತಿಯಾರ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ಮೂಲಕ ತೋರಿಸಿರುವ ಪ್ರೀತಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು.

ಇನ್ನೋರ್ವ ಪುರಸಭೆ ಮಾಜಿ ಸದಸ್ಯ ಇಬ್ರಾಹಿಂ ಮನ್ಸೂರ, ಖಾಜಾಹುಸೇನ ಚೌದ್ರಿ ಮಾತನಾಡಿ ಸಾಮರಸ್ಯಕ್ಕೆ ಹೆಸರಾದಂತಹ ತಾಳಿಕೋಟೆ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂದವರು ಹಬ್ಬ ಹರಿದಿನಗಳಲ್ಲಿ ಪರಸ್ಪರ ಕೂಡಿಕೊಂಡು ಹಬ್ಬಗಳನ್ನು ಈ ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದಾರೆ ಆಚರಗಳು ಬೇರೆಯಾದರೂ ವಿಚಾರಗಳು ಒಂದೇ ಆಗಿವೆ ಎಂದ ಅವರು ಸಾಮರಸ್ಯದ ಹಾದಿಯಲ್ಲಿ ಜನರನ್ನು ಕೊಂಡೊಯಲು ಕೊಣ್ಣೂರಿನ ಸಿ.ಬಿ.ಅಸ್ಕಿ ಪರಿವಾರ ಮುಸ್ಲಿಂ ಬಾಂದವರ ಮೇಲಿಟ್ಟ ಪ್ರೀತಿ ಅಘಾದವಾದುದ್ದಾಗಿದೆ ರಂಜಾನ್ ಹಬ್ಬದ ಸಮಯದಲ್ಲಿ ಪ್ರತಿವರ್ಷವೂ ಇಪ್ತಿಯಾರಕೂಟ ಆಯೋಜಿಸಿ ಸಮಾಜದಲ್ಲಿ ಸಾಮರಸ್ಯವನ್ನು ಬಿತ್ತುವಂತಹ ಕೆಲಸ ಮಾಡುತ್ತಿರುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು ಹಣ ಸಾಕಷ್ಟು ಜನರ ಬಳಿ ಇದೆ ಆದರೆ ಅದರಲ್ಲಿ ಸಮಾಜಕ್ಕಾಗಿ ಸ್ವಲ್ಪು ಉಪಯೋಗಿಸುವ ಮನೋಭಾವನೆ ಇರುವದಿಲ್ಲಾ ಸಿ.ಬಿ.ಅಸ್ಕಿ ಅವರು ಹಣಕ್ಕಿಂತ ಜನಪ್ರೀತಿ ದೊಡ್ಡದು ಎಂದು ಅರೀತುಕೊಂಡು ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಹಿಂದೂ ದೇವಾಲಯಗಳಿರಲಿ, ಮುಸ್ಲಿಂ ಮಸೀದಿ ದರ್ಗಾಗಳಿರಲಿ ಎಲ್ಲವುಗಳ ಕಟ್ಟಡಗಳಿಗೆ ಸದಾ ಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ ಇವರ ಸೇವೆ ಹೀಗೆ ಮುಂದುವರೆಯಲಿ ದೇವರು ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಒದಗಿಸುವ ಶಕ್ತಿ ನೀಡಲಿ ಎಂದರು.

ಇನ್ನೋರ್ವ ಮುಖಂಡ ಮೂಕೀಹಾಳದ ಕಾಶಿಂಪಟೇಲ ಪಾಟೀಲ, ಶಮಶುದ್ದೀನ ನಾಲಬಂದ ಅವರು ಮಾತನಾಡಿ ಸೌಹಾರ್ದತೆ ಮತ್ತು ಸಾಮರಸ್ಯೆಕ್ಕೆ ಸಾಕ್ಷೀಕರಿಸಿರುವ ಕೊಣ್ಣೂರಿನ ಅಸ್ಕಿ ಪೌಂಡೇಶನ್‍ದ ಅಧ್ಯಕ್ಷ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದೇ ಸಮಯದಲ್ಲಿ ಮುಸ್ಲಿಂ ಬಾಂದವರ ವತಿಯಿಂದ ಸಿ.ಬಿ.ಅಸ್ಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಮುಖಂಡರುಗಳಾದ ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಗೌಸ ನಾಸರ, ಮಂಜೂರ ಬೇಪಾರಿ, ಶಿವರಾಜ ನಾಗೂರ, ಪರಸು ನಾಗೂರ, ದ್ಯಾಮಣ್ಣ ಸೋಮನಾಳ, ಶರಣಯ್ಯ ಹಿರೇಮಠ, ಮಹ್ಮದ ವಾಲಿಕಾರ, ರಹೀಮಸಾಬ ಅವಟಿ, ಬಂದೇನವಾಜ ಕಡಕೋಳ, ಪರಶುರಾಮ ತಂಗಡಗಿ, ಬಿ.ವ್ಹಿ.ಅಸ್ಕಿ, ವೀರೇಶ ಅಸ್ಕಿ, ಯಲ್ಲಪ್ಪ ಮಾದರ, ರಮೇಶ ಹಿಪ್ಪರಗಿ, ಮಹೇಶ ತಳವಾರ, ಬಂದಿಗಿಸಾಬ ಮಡಿಕೇಶ್ವರ, ಶೌಕತ್ ಲಾಹೋರಿ, ಶಿವರಾಜ ಅಸ್ಕಿ, ಮೊದಲಾದವರು ಉಪಸ್ಥಿತರಿದ್ದರು.