ರಂಜಾನ್ ಹಬ್ಬದ ಶುಭ ಕೋರಿದ ಡಾ. ಅಜಯ್ ಸಿಂಗ್- ಜೇವರ್ಗಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ

ಕಲಬುರಗಿ:ಏ.22:ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಜೇವರ್ಗಿಯ ಇದಿಗಾ ಮೈದಾನಕ್ಕೆ ಭೇಟಿ ನೀಡಿ, ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜೇವರ್ಗಿ ಶಾಸಕರು, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕಾಂಗ್ರೆಸ್ ಹುರಿಯಾಳು ಡಾ. ಅಜಯ್ ಧರ್ಮಸಿಂಗ್ ಅವರು ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರಿದರು.

ರಂಜಾನ್ ಮಾಸ ಹಾಗೂ ಅದೇ ಅವಧಿಯಲ್ಲಿ ಬರುವ ರಂಜಾನ್ ಹಬ್ಬ ಮುಸಲ್ಮಾನ ಸಮುದಾಯದ ಸಹೋದರರ ಅತ್ಯಂತ ಪವಿತ್ರ ಹಬ್ಬ, ಈ ಹಬ್ಬ ಶಾಂತಿ, ಸಾಮರಸ್ಯದ ಸಂದೇಶಗಳನ್ನು ವಿಶ್ವದಲ್ಲಿ ಸಾರಿದೆ. ಈ ಹಬ್ಬದ ಸಂದೇಶ ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ. ನಾವು ಎಲ್ಲರು ಸಹೋದರತೆ, ಶಾಂತಿಯೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದರು.

ರಂಜಾನ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಡಾ. ಅಜಯ್ ಧರ್ಮಸಿಂಗ್ ಅವರು ಎಲ್ಲ ಮಉಸ್ಲಿಂ ಬಾಂಧವರೊಂದಿಗೆ ಭಾಗವಹಿಸಿ ಜಗತ್ತಿನ ಕಲಾಣ, ಸಾಂತಿ, ಸಾಮರಸ್ಯಕ್ಕಾಗಿ ಅಲ್ಲಾಹುವಿನಲ್ಲಿ ಕೋರಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಷದ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ, ಶಿವು ಕಲ, ರವಿ ಕೊಳಕೂರ್, ಇಬ್ರಾಹಿಂ ಸಾಬ್ ಉಸ್ತಾದ್, ಸಲೀಮ್ ಕನ್ನಿ, ದನಿ ಕಾಶಿಮ್ ಪಟೇಲ್,ರುಕುಮ್ ತೋಲಾ, ರಫೀಕ್ ಜಮಾದಾರ್, ಇಮ್ರಾನ್ ಕಾಸರಬೋಸಾಗ ಸೇರಿದಂತೆ ಮುಸ್ಲಿಂ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.