ರಂಜಾನ್ ಶಾಂತಿ ಸಭೆ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಿ- ಅವಿನಾಶ ಕಾಂಬ್ಳೆ

ಸಿರವಾರ.ಏ೨೧-ಹಿಂದು-ಮುಸ್ಲಿಂ ಧರ್ಮದ ಎಲ್ಲರೂ ಸಹೋದರ ಭಾವತ್ವದಿಂದ ಹಬ್ಬಗಳನ್ನು ಆಚರಿಸುತ್ತ ಬಂದಿದ್ದಾರೆ. ಈ ಬಾರಿ ರಂಜಾನ್ ಹಬ್ಬವು ನಡೆಯಲಿದ್ದು, ಎಲ್ಲರೂ ಶಾಂತಿಯುತವಾಗಿ ಹರುಷದಿಂದ ಹಬ್ಬ ಆಚರಣೆ ಮಾಡಬೇಕು ಎಂದು ಪಿಎಸ್ ಐ ಅವಿನಾಶ ಕಾಂಬ್ಳೆ ಹೇಳಿದರು. ಪಟ್ಟಣದ ಪೋಲಿಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಕರೆಯಲಾಗಿತು ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ ಏಷ್ಟು ಗಂಟೆಗೆ ಹಬ್ಬದ ನಿಮಿತ್ಯ ನಮಾಜ್ ಮಾಡುತ್ತಿರಿ, ಮೆರವಣಿಗೆ ಮಾಡಬಾರದು, ಈದ್ಗಾ ಮೈದಾನದ ರಸ್ತೆಯನ್ನು ಬಂದ್ ಮಾಡಲಾಗುವುದು, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು, ಅಂತರ್ಜಾಲದಲ್ಲಿ ಯಾವುದೇ ಪೋಟೊ, ವಿಡಿಯೊ ಹಾಕಿದರೆ ಪ್ರತಿಕ್ರೀಯೆ ನೀಡಬಾರದು. ಸಂಚಾರ ದಟ್ಟನೆಗೆ ಹೆಚ್ಚಾಗಿದೆ, ರಸ್ತೆಲ್ಲಿ ವಾಹನಗಳನ್ನು ಅಡ್ಡಾದಿಡಿಯಾಗಿ ನಿಲ್ಲಿಸಬಾರದು ಎಂದರು. ಖಾಜಾ ಮಂಜೂರು ಸಾಬ್, ಖಾಜಿ ನವಾಜ್ ಪ.ಪಂ ಸದಸ್ಯ ಕೃಷ್ಣ ನಾಯಕ, ಮೌಲಾಸಾಬ ವರ್ಚಸ್, ಹಾಜಿ ಚೌದ್ರಿ, ಹಸೇನ ಅಲಿಸಾಬ್, ಎಂಡಿ ವಲಿಗುತ್ತೆದಾರ, ಮಹ್ಮದ್ ಹುಸೇನ್,ಸತ್ತರ ಸಾಬ್, ಇಬ್ರಾಹಿಂ ಎಲ್ ಐ ಸಿ, ಮಹಿಬೂಬ್ ಸಾಬ ದೊಡ್ಮನೆ ಸೇರಿದಂತೆ ಇನ್ನಿತರರು ಇದರು