ರಂಜಾನ್ ರೋಜಾ ಪ್ರಾರಂಭ – ಮೊದಲ  ಇಫ್ತಿಯರ್ ಕೂಟದಲ್ಲಿ ಮುಸ್ಲಿಂ ಬಾಂಧವರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.25 :- ಚಂದ್ರಮಾನ ಯುಗಾದಿ ದಿನದಂದು ಚಂದ್ರನ ದರ್ಶನ ಮಾಡುವ ಮೂಲಕ ಮರುದಿನದಿಂದ ಮುಸ್ಲಿಂ ಬಾಂಧವರು ನಿನ್ನೆಯಿಂದ ತಿಂಗಳ ಉಪವಾಸ ಪ್ರಾರಂಭಿಸಿದ್ದು ಮೊದಲ ದಿನದ ಉಪವಾಸ ಮುಗಿಸಿ ನಿನ್ನೆ ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಇಫ್ತಿಯರ್ ಕೂಟದಲ್ಲಿ ಮೊದಲದಿನದ ರೋಜಾ ಬಿಟ್ಟರು.
ನಿನ್ನೆ ಸಂಜೆ ಕೂಡ್ಲಿಗಿ ಪಟ್ಟಣದ  ನೂರಾನೀ ಮಸೀದಿಯಲ್ಲಿ  ಮೊದಲ ರೋಜಾ ದಿನದ ಇಫ್ತಿಯಾರ್ ಕೂಟದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು  ಸೇರಿ ರೋಜಾ ಬಿಡುವ  ಸಂದರ್ಭ ಕಂಡುಬಂದಿತು.