ರಂಜಾನ್ ಮುಸ್ಲಿಮರಿಗೆ ಪವಿತ್ರ ತಿಂಗಳು

ಸೈದಾಪುರ:ಎ.22:ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದೂ ಅಲ್ಲಾನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಪ್ರಕಾಶ ರಾಠೋಡ ಹೇಳಿದರು.

ಪಟ್ಟಣದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಮ ಭಾಂದವರಿಗೆ ಹಮ್ಮಿಕೊಂಡ ಇಫ್ತಿಯಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು ಸುಮಾರು 11 ವರ್ಷಗಳಿಂದ ಇಫ್ತಿಯಾರ ಕೂಟ ನೆರವೇರಿಸುತ್ತಿದ್ದೇನೆ ಅದರಂತೆ ಈ ವರ್ಷವೂ ಆಯೋಜನೆ ಮಾಡುವುದರ ಮೂಲಕ ಭಾವೈಕ್ಯತೆ ಸಾರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಲಾಭಾಷಾ ಹಿಚಗೇರಿ, ಅಬ್ದುಲ ಹಪೀಜ, ದೀಪಕ, ಅನಿಲ, ನಿಜಾಮ, ಇಮ್ತಿಯಾಜ, ತನವೀರ, ಸದ್ದಾಂ, ಅನ್ವರ ಸೇರಿದಂತೆ ಇತರರಿದ್ದರು.