ರಂಜಾನ್: ಬಡವರಿಗೆ ಆಹಾರ ಸಾಮಗ್ರಿ ವಿತರಣೆ

ವಾಡಿ:ಎ.20: ಮುಸ್ಲಿಂರ ಪವಿತ್ರ ರಂಜಾನ್ ತಿಂಗಳಿನಲಿ,್ಲ ಬಡವರು ಯಾವುದೇ ತೊಂದರೆ ಆಗದಂತೆ ಕಳೆಯಲ್ಲಿ. ಅವರು ಕೂಡಾ ಉತ್ತಮ ರೀತಿಯಲ್ಲಿ ಹಬ್ಬ ಆಚರಣೆ ಮಾಡಲೀ ಎಂದು ಕಲಬುರಗಿ-ಯಾದಗಿರಿ ಜಮಾತ್-ಎ-ಅಹ್ಲೇ ಹದೀಸ್ ಸಮಿತಿ ಅಧ್ಯಕ್ಷ ಜನಾಬ್ ನಜರ ಮಹಮ್ಮದ ಬಾಬಾ ಖಾನ್ ಹೇಳಿದರು.

ವಾಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅತ್ಯಂತ ಕಡುಬಡವರನ್ನು ಗುರುತಿಸಿ ಅವರಿಗೆ ಅಕ್ಕಿ-25ಕೆಜಿ, ಬೆಳೆ, ಎಣ್ಣೆ, ಸಕ್ಕರೆ, ಹಾಗೂ ರಮಜಾನ್ ಹಬ್ಬಕ್ಕೆ ಸಿಹಿಖಾದ್ಯ(ಷೀರ್‍ಖುರಮಾ) ಮಾಡುವ ಸಾಮಗ್ರಿಗಳನ್ನು 100ಕ್ಕೂ ಅಧಿಕ ಕುಟುಂಬಗಳಿಗೆ ವಿತರಿಸಿ ಮಾತನಾಡುತ್ತಾ, ರಂಜಾನ್ ಮಾಸವು ಮುಸ್ಲಿಂಮರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಉಪವಾಸ, ಪವಿತ್ರ ಕುರಾನ್ ಪಠಣೆ ಮಾಡುವುದರ ಮೂಲಕ ಸರ್ವರನ್ನು ಶಾಂತಿ, ಸಮನ್ವಯದಿಂದ ಆ ಅಲ್ಲಾಹನ್ನು ಕಾಪಾಡಲಿ ಎಂದು ಪ್ರಾರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸೋಹೇಲ್ ಅಹ್ಮೇದ, ಬಶೀರ ಅಹ್ಮದ್, ಜಹೂರ್‍ಖಾನ್, ಯೂಸುಫ ಕೊಂಡಾಜಿ, ರಾಜಾಪಟೇಲ್ ಇದ್ದರು.