ರಂಜಾನ್ ಪ್ರಯುಕ್ತ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ.


ಸಂಜೆವಾಣಿವಾರ್ತೆ
ಹರಪನಹಳ್ಳಿ ಏ.7;ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಅಂಜುಮನ್ ಶಾದಿಮಹಲ್‍ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ತಲೂಕು ಘಟಕ ಹರಪನಹಳ್ಳಿ ಇವರ ವತಿಯಿಂದ ಆಯ್ದ ಬಡ ಕುಟುಂಬಗಳಿಗೆ, ವಿಧವೆಯರಿಗೆ ಆಹಾರ ಪದಾರ್ಥಗಳ ರಂಜಾನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ.ಎಸ್.ಉಸ್ಮಾನ್, ಕಾರ್ಯದರ್ಶಿ ಸಲೀಂ, ಜಿಲ್ಲಾದ್ಯಕ್ಷ ಷರೀಪ್ ಮಕರಬ್ಬಿ, ಸಂಘದ ನೌಕರರಾದ ಅಬ್ದುಲ್ ಸಲಾಮ್, ಯಾಯ್ಯ, ದಾದಾಪೀರ್, ಹುಸೇನ್ ಪೀರ್, ರುಕ್ಷನಾ, ಜಮಾಲ್ ಸಾಬ್, ಎಸ್.ಶಫಿ, ನೂರುಲ್ಲಾ, ನಗೀನಬಾನು, ನಫೀಜಾ, ಅಮಾನುಲ್ಲಾ, ಅಲ್ಪಾಪ್ ಸೇರಿದಂತೆ ಇತರರು ಇದ್ದರು.