ರಂಜಾನ್ ಪ್ರಯುಕ್ತ ಕಠಿಣ ಉಪವಾಸ ವ್ರತ ಪೂರ್ಣಗೊಳಿಸಿದ ಆರು ವರ್ಷದ ಬಾಲಕ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೨೮: ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಕಠಿಣ ಉಪವಾಸವನ್ನು ಒಂದು ತಿಂಗಳು ಕೈಗೊಳ್ಳುತ್ತಾರೆ. ಅದೇ ರೀತಿಯಲ್ಲಿ ಆರು ವರ್ಷದ ಬಾಲಕ ಸೈಯದ್ ಖಾಯದ್ ಅಹ್ಮದ್ ಒಂದು ದಿನ ಕಠಿಣ ಉಪವಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.ಕಾಂಗ್ರೆಸ್ ನ ಹಿರಿಯ ಮುಖಂಡ ಸೈಯದ್ ಸೈಫುಲ್ಲಾ ಅವರ ಮೊಮ್ಮಗ ಹಾಗೂ ಸೈಯದ್ ಖಾಲಿದ್ ಅಹ್ಮದ್ ರ ಪುತ್ರ. ರಂಜಾನ್ ಹಬ್ಬ ಶುರುವಾದಾಗಿನಿಂದ ಉಪವಾಸ ವ್ರತ ಕೈಗೊಳ್ಳುವುದು ಮುಸ್ಲಿಂ ಸಮುದಾಯದ ಸಂಪ್ರದಾಯ. ಒಂದು ದಿನ ಕಠಿಣ ಉಪವಾಸ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.ಮಂಗಳವಾರ ಉಪವಾಸ ಪೂರೈಸಿದ್ದು, ಹನಿ ನೀರೂ ಸೇವನೆ ಮಾಡದೇ ವ್ರತ ಆಚರಿಸಬೇಕು. ಅದರಂತೆ ಸೈಯದ್ ಖಾಲಯದ್ ಅಹ್ಮದ್ ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ನಾಮ ಪಠಣ ಮಾಡುತ್ತಾ ಇಂಥ ಬಿರು ಬೇಸಿಗೆಯಲ್ಲಿಯೂ  ಒಂದು ಹನಿ ನೀರೂ ಕುಡಿಯದೇ  ಉಪವಾಸ ಸತ್ಯಾಗ್ರಹ ಮುಗಿಸಿದ್ದಾನೆ.ಮುಂದಿನ ದಿನಗಳಲ್ಲಿಯೂ ಉಪವಾಸ ಕೈಗೊಳ್ಳುವ ನಿರ್ಧಾರ ಮಾಡಿರುವ ಸೈಯದ್ ಖಾಯದ್ ಅಹ್ಮದ್ ಗೆ ದೇವರು ಹೆಚ್ಚಿನ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ತಾತ ಸೈಯದ್ ಸೈಫುಲ್ಲಾ, ತಂದೆ ಸೈಯದ್ ಖಾಲಿದ್ ಅಹ್ಮದ್ ಮತ್ತು ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ.