ರಂಜಾನ್ ಆತ್ಮಶುದ್ದೀಕರಣ ಮಾಸ : ಸಾದಾತ

ವಿಜಯಪುರ : ಎ.23:ರಂಜಾನ ಆತ್ಮಶುದ್ದೀಕರಣ ಮಾಸವಾಗಿದೆ ಉಪವಾಸ, ಪ್ರಾರ್ಥನೆ, ರಾತ್ರಿಯ ಸಮಯದಲ್ಲಿ ಕುರ್ ಆನ್ ಪಠಣ ಹಾಗು ಶಕ್ತಿಯುಳ್ಳವರು ಬಡವರಿಗೆ ದಾನ ಮಾಡುವ ಮೂಲಕ ಪುಣ್ಯ ಪಡೆದುಕೊಳ್ಳುತ್ತಾರೆ ಎಂದು ಸೈಯದ ಪೈಸಲ್ ಸಕಫ್ ಸಾದಾತ ಅವರು ಆಸಾರ ಮಸೀದಿಯಲ್ಲಿ ಪ್ರಾರ್ಥನೆ ನಂತರ ಪ್ರವಚನ ಮಾಡಿದ ದೇವರ ಸ್ಮರಣೆ ನಿರಂತರವಾಗಿರಬೇಕು. ಮಾನವೀಯತೆಯ ವೌಲ್ಯಗಳನ್ನು ಕಾಪಾಡುವ ಹೊಣೆಗಾರಿಕೆ ನಮ್ಮದಾಗಿರಬೇಕು. ನಂಬಿಕೆಯ ಬದುಕು ಕಟ್ಟಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ಸಾಗಬೇಕು. ಇತರರಿಗೆ ಮಾದರಿಯಾಗಬೇಕು. ಸೌಹಾರ್ದ ಸಂಬಂಧಗಳು ಗಟ್ಟಿಗೊಳಿಸಬೇಕು. ಕಾಯಕ ಜೀವನಕ್ಕೆ ಮಹತ್ವ ನೀಡಬೇಕು.
ಸಮಾನತೆಯ ಸಮಾಜಕ್ಕೆ ಮನ್ನಣೆ ನೀಡಬೇಕು. ದುಶ್ಚಟಗಳಿಂದ ದೂರವಿರುವಬೇಕು. ಗುಮಾನಿ ಸುದ್ದಿಗಳನ್ನು ಹರಡಿಸಬಾರದು. ಸಮಾಜದಲ್ಲಿ ಸಾಮರಸ್ಯ ವಾತಾವರಣ ನಿರ್ಮಿಸುವ ಮೂಲಕ ದೇಶದ ಶ್ರೇಷ್ಠತೆ ಉಳಿಸಿಕೊಳ್ಳಬೆಕೆಂದರು ಸೈಯ್ಯದ ಸಾದಾತ ಹೇಳಿದರು. ಸೈಯ್ಯದ ಮುಸ್ತಪಾ ಖಾದ್ರಿ ಸಾದತ ಕಸಾಪ ಅಧ್ಯಕ್ಷ
ಹಾಸಿಂಪೀರ ವಾಲಿಕಾರ ನಗರಾಬಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆಜಾದ ಪಟೇಲ ಜಾವೀದ ಕಿಲ್ಲೆದಾರ ಜಮೀರ ಬಾಗಲಕೋಟ ಮಹಮ್ಮದಗೌಸ ಮುಜಾವರ ಸಲೀಮ ಬಾಗವಾನ ಅನೀಷ ಬಂತೋಜಿ ಡಾ : ಮಹಮ್ಮದ ಬಾಯಿ ನಜೀರ ಮುಂತಾದವರು ಉಪಸ್ಥಿತರಿದ್ದರು.