ರಂಜಾನ್ ಆಚರಣೆ

ಅಣ್ಣಿಗೇರಿ,ಏ23 : ರಂಜಾನ್ ಹಬ್ಬದ ನಿಮಿತ್ಯ ಅಣ್ಣಿಗೇರಿ ನಗರದ ಈದ್ಗಾ ಮೈದಾನಕ್ಕೆ ಸಚಿವ ಶಂಕರ ಪಾಟೀಲ ಮುನೇನಕೋಪ ಆಗಮಿಸಿ ಮುಸ್ಲಿಂ ಭಾಂದವರಿಗೆ ಶುಭಕೋರಿದರು. ಧರ್ಮಗುರು ಅಲ್ಲಾಜ್ ಇಬ್ರಾಹಿಂಸಾಬ್ ಖತೀಬ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ನಡೆಯಿತು.
ಪ್ರಾರ್ಥನೆಯಲ್ಲಿ ಮಕ್ಕಳಾದಿಯಾಗಿ ಎಲ್ಲರೂಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು. ನಿರಂತರವಾಗಿ ಒಂದು ತಿಂಗಳ ಕಾಲ ರಂಜಾನ್ ಉಪವಾಸ ಕೈಗೊಂಡ ವ್ರತಾಧಾರಿಗಳಿಗೆ ಹಿಂದೂ ಮುಖಂಡರು ಶರಬತ್ತು, ತಂಪು ಪಾನೀಯ ನೀಡಿ ಭಾವೈಕ್ಯತೆ ಮೆರೆದರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಐ.ಜಿ.ಸಮುದ್ರಿ, ಶಿವಯೋಗಿ ಸುರಕೋಡ ಸಿಜಿ ನಾವಳ್ಳಿ: ಮಹೇಶ ದೇಸಾಯಿ, ನಡಕಟ್ಟಿನ, ಗುಡುನಾಯ್ಕರ್, ಸುಂಕದ ರೋಣದ ಇತರರು ಉಪಸ್ಥಿತರಿದ್ದರು.