ರಂಜಾನ್ ಆಗಮನ; ಉರ್ದು ಕವಿಗೋಷ್ಠಿ

ಹರಿಹರ.ಏ.18 ; : ಆಝದ್ ಉರ್ದು ಲೈಬ್ರರಿ ಹರಿಹರದವತಿಯಿಂದ ನಗರದ ಬಾಹರ್ ಮಖಾನ್ ಎ.ಎಂ ಶಾದಿಮಹಲ್ ಬಳಿ ಇರುವ ಜಮಾಯತ್ ಎ ಇಸ್ಲಾಂ ಕಛೇರಿಯ ಹಾಲ್ ನಲ್ಲಿ  ಉರ್ದು ಮತ್ತು ಕನ್ನಡ ಮುಶಾಯಿರ (ಕವಿಗೋಷ್ಠಿ) ಹಮ್ಮಿಕೊಳ್ಳಲಾಗಿತ್ತು. ರಂಜಾನ್ ತಿಂಗಳ ಆಗಮನದ ಹಿನ್ನಲೆಯಲ್ಲಿ  ರಂಜಾನ್ ನಿನಗೆ ಸ್ವಾಗತ ಎಂಬ ವಿಷಯದ ಬಗ್ಗೆ ಕವಿಗೋಷ್ಠಿಯಲ್ಲಿ  ಕವಿಗಳಿಂದ ಅದ್ಭುತವಾಗಿ ಕವಿತೆಗಳು ಮೂಡಿ ಬಂದವು. ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದರಿಂದ  ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಅದೃಷ್ಟ ಸಂಪಾದನೆ ಮಾಡಲು ಈ ಒಂದು ತಿಂಗಳು  ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ. ಎಲ್ಲಾ ಬಾಂಧವರು ದ್ವೇಷ ಅಸೂಯೆ ತೊರೆದು ಪ್ರೀತಿ, ಸಹಬಾಳ್ವೆಯಿಂದ ಬದುಕಬೇಕು.   ಆದರೆ ದೇಶದಾದ್ಯಂತ ಮಹಾಮಾರಿ ಕೊರೋನಾ ತಂದೊಡ್ಡಿರುವ ಕಂಟಕದಿಂದ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು. ಈ ಪವಿತ್ರ ರಂಜಾನ್ನಲ್ಲಿ ಮಾಡುವ ಪವಿತ್ರ ಪ್ರಾರ್ಥನೆಯಿಂದ  ಮಹಾಮಾರಿ ವೈರಸ್  ಕೊನೆಗಾಣಬೇಕು ಎಂದು ಗೋಷ್ಠಿಯಲ್ಲಿ ಕವಿಗಳು ನುಡಿದರು.  ಕನ್ನಡದ ಕವಿ ಕಲೀಂ ಬಾಷ ರವರು ಬಾಗಿಲು ತೆರದಿದೆ ಬಾ ಎನ್ನುವ ಕವಿತೆಯನ್ನು ವಾಚಿಸುವುದರ ಮೂಲಕ ಮೆಚ್ಚುಗೆಗೆ ಪಾತ್ರರಾದರೆ ಉಳಿದಂತೆ ಎಲ್ಲಾ ಉರ್ದು ಮತ್ತು ಕನ್ನಡ ಕವಿಗಳು ಗಮನ ಸೆಳೆದರು. ಹೊಳೆಸಿರಿಗೆರೆಯ ಕವಯತ್ರಿ ಮಂಜಮ್ಮ, ನಾಗರತ್ನಮ್ಮ, ಜರೀನಾ ಬಾನು ಕವಿತೆಗಳಲ್ಲಿ ಮಿಂಚಿದರು.  ಹೆಚ್.ಕೆ ಕೊಟ್ರಪ್ಪ, ಬಿ ಮಗ್ದುಂ, ಚನ್ನಬಸಪ್ಪ ಹುಲಿಕಟ್ಟಿ ಇತರರು ವಿಭಿನ್ನ ಕವಿತೆಗಳನ್ನು ವಾಚಿಸಿದರು.  ಹಿರಿಯ ಉರ್ದು ಕವಿಗಳಾದ ಅಜೀಜುರ್ ರಹಮಾನ್ ಶಾಹಿದ್ ಅಧ್ಯಕ್ಷತೆವಹಿಸಿದ್ದರು.ಸೈಯದ್  ಖಮರುದ್ದೀನ್ ನಿರೂಪಿಸಿದರು.  ಗೌಸ್ ಪೀರ್, ಬಶರ್ ಬಿಜಾಪುರಿ, ಮುನೀರ್, ಹಬೀಬ್ ವುಲ್ಲಾ ಸಾಬ್, ಉರ್ದು ಮತ್ತು ಕನ್ನಡದ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.