ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಗಂಗಾವತಿ, ಏ.22: ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.
ಒಂದು ತಿಂಗಳ ಪರ್ಯಂತ ಉಪವಾಸ ವೃತಾಚರಣೆ ಮಾಡಿ ಇಂದು ಹಬ್ಬದಂದು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಒಬ್ಬರಿಗೊಬ್ಬರ ಶುಭಾಷಯ ಕೋರುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಯುವ ಮುಖಂಡ ಇಮ್ತೀಯಾಜ್ ಅನ್ಸಾರಿ, ರಡ್ಡಿ ಆಪ್ತ ಅಲಿಖಾನ್, ಸೈಯದ್ ಅಲಿ, ಸೈಯದ ಮೀರ್, ಸೈಯದ್ ಜಿಲಾನಿ ಪಾಷಾ, ಉಸ್ಮಾನ್ ಬಚ್ಕತ್ತಿ, ಅಬ್ದುಲ್ ಜಬ್ಬಾರ ಬಿಚ್ಕತ್ತಿ ಸೇರಿದಂತೆ ಅನೇಕ ಮುಖಂಡರು ಇದ್ದರು.