ರಂಜಾನ್​ ಹಬ್ಬಕ್ಕೆ ಕೊರೊನಾ ಮಾರ್ಗಸೂಚಿ ಬಿಡುಗಡೆ

Bhopal: Muslims seen outside the Moti Masjid during the first day of the holy fasting month of Ramadan, in Bhopal, Monday, May 6, 2019. (PTI Photo)(PTI5_6_2019_000289B)

ಬೆಂಗಳೂರು,ಏ.13- ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಪವಿತ್ರ ರಂಜಾನ್​ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯ ಮಾಸ್ಕ್​ ಬಳಸುವಂತೆ ಸರ್ಕಾರ ತನ್ನ ಹೊಸ ಗೈಡ್​ಲೈನ್ಸ್​​​ನಲ್ಲಿ ವಿವರಿಸಿದೆ.
ಹೊಸ ಮಾರ್ಗ ಸೂಚಿ:
*ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು ನಮಾಜ್​ ವೇಳೆ ಒಬ್ಬರು ಒಂದೇ ಕಾರ್ಪೆಟ್​ ಬಳಸಬೇಕು.
*ಕಂಟೈನ್​ಮೆಂಟ್​ ಝೂನ್​ನಲ್ಲಿರುವ ಮಸೀದಿಗಳನ್ನು ಬಂದ್​ ಮಾಡಬೇಕು.
*ನಮಾಜ್​ಗೂ ಮುನ್ನ 5 ನಿಮಿಷ ಮಸೀದಿಗಳ ಬಾಗಿಲು ತೆರೆಯಬೇಕು.
*ಮೂರು ಪಾಳಿಯಲ್ಲಿ ನಮಾಜ್​ ಮಾಡಬೇಕು.
*ನಮಾಜ್​ ಮಾಡುವ ಸ್ಥಳದಲ್ಲಿ ಮಾರ್ಕ್​ಗಳನ್ನು ಹಾಕಬೇಕು.
*ಮನೆಯಲ್ಲಿ ಇಫ್ತಿಯಾರ್​ ಕೂಟ ಮುಗಿಸಬೇಕು.
*60 ವರ್ಷ ಮೇಲ್ಪಟ್ಟವರು ಮನೆಯಲ್ಲಿ ನಮಾಜ್​ ಮಾಡಬೇಕು.
*ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್​ ವ್ಯವಸ್ಥೆ ಮಾಡಬೇಕು.
*ಮುಂದಿನ ಆದೇಶದವರೆಗೆ ಕಂಟೈನ್​ಮೆಂಟ್​ ವಲಯದ ಮಸೀದಿ ತೆರೆಯದಂತೆ ಸೂಚಿಸಲಾಗಿದೆ.
*ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್​ ವ್ಯವಸ್ಥೆ
*ನಮಾಜ್​ ಮುಗಿದ ತಕ್ಷಣ ಮಸೀದಿಯ ಬಾಗಿಲು ಮುಚ್ಚಬೇಕು.
*ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್​ ಕಡ್ಡಾಯ
*ಕಂಟೈನ್​ಮೆಂಟ್​ ವಲಯ ಹೊರತುಪಡಿಸಿ ಉಳಿದೆಡೆ ಮಾತ್ರ ನಮಾಜ್​ಗೆ​ ಅವಕಾಶ