ರಂಗ ಶಿಬಿರ ಉದ್ಘಾಟನೆ

ಕೋಲಾರ,ಏ,೧೨- ನಿತ್ಯ ಜೀವನ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಚೌಡೇಶ್ವರಿ ಅಕಾಡೆಮಿ ಅಯೋಜಿಸಿರುವ ಬೇಸಿಗೆ ರಂಗ ಶಿಬಿರದ ಉದ್ಘಾಟನೆಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಖ್ಯಾತ ಮಕ್ಕಳ ತಜ್ಞರು ಮತ್ತು ಚೌಡೇಶ್ವರಿ ಅಕಾಡೆಮಿಯ ಮುಖ್ಯಸ್ಥರು ಆದ ಡಾ.ಬೀರೆಗೌಡ ಉದ್ಘಾಟಿಸಿದರು. ಶಿಬಿರ ೧೫ ದಿನಗಳ ಕಾಲ ನಡೆಯುತ್ತದೆ. ಈ ಶಿಬಿರದಲ್ಲಿ ನಟನೆ ಹಾಡು ಜಾನಪದ ನೃತ್ಯ ದೇಸಿ ಆಟ ದಂತಹ ಚಟುವಟಿಕೆಗಳು ನೆಡೆಯುತ್ತವೆ, ಇತ್ತಿಚಿನ ದಿನಗಳಲ್ಲಿ ಮಕ್ಕಳಲ್ಲಿ ಸಹ ಓದಿನ ಒತ್ತಡದಿಂದ ಮಾನಸಿಕ ಖಿನ್ನತೆಗಳು ಹೆಚ್ಚಾಗುತ್ತಿದ್ದು ಈ ಚಟುವಟಿಕೆಗಳಿಂದ ಮಾನಸಿಕವಾಗಿ ಮಕ್ಕಳು ಎಲ್ಲಾ ರೀತಿಯಲ್ಲು ಸದೃಡವಾಗಲೂ ಸಹಕಾರಿಯಾಗಿವೆ ಎಂದು ತಿಳಿಸಿದರು.
ಮಕ್ಕಳ ತಜ್ಞ ವೈದ್ಯರಾದ ಡಾ.ಆಶಾ ಮಾತನಾಡಿ ನಾಟಕ ಆಟ ಚಿತ್ರಕಲೆಗಳು ನಮ್ಮ ಕಲ್ಪನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಯೋಚನಾ ಲಹರಿ ಸಹ ಬೇರೆ ರೀತಿಯಲ್ಲಿ ಬೆಳವಣಿಗೆಯಾಗುತ್ತದೆ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳುವಲ್ಲಿ ಕಲೆ ಸಾಹಿತ್ಯದ ಪಾತ್ರ ಬಹಳ ಮುಖ್ಯವಾದದ್ದು ಎಂದು ಹೇಳಿದರು.
ನಿತ್ಯ ಜೀವನ ಚಾರಿಟಬಲ್ ಟ್ರಸ್ಟಿನ ಮುಖ್ಯಸ್ಥರಾ ಅನು ಅವರು ಮಾತನಾಡಿ ಸಮಾಜದ ಎಲ್ಲಾ ಮಕ್ಕಳಿಗೂ ಎಲ್ಲಾ ಸೌಲಭ್ಯಗಳು ಸಿಗುವಂತಾಗ ಬೇಕು ಅದಕ್ಕಾಗಿ ಈ ಶಿಬಿರ ಅಯೋಜಿಸಲಾಗಿದೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಶಿಬಿರದ ಅವಕಾಶ ಕಲ್ಪಿಸಿದ್ದು ಹಲವರು ನೆರವು ಒದಗಿಸಿದ್ದಾರೆ. ಶಿಬಿರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು ಮಕ್ಕಳ ಅಭ್ಯೂದ್ಯಯಕ್ಕೆ ಪೋಷಕರು ಈ ರೀತಿಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ತಜ್ಞ ವೈದ್ಯರ ಸಂಘದ ಡಾ.ಶ್ರೀನಾಥ್, ಡಾ.ನರೇಂದ್ರ, ಸ್ತ್ರೀ ತಜ್ಞ ವೈದ್ಯರಾದ ಉಮಾದೇವಿ, ರವಿ ಎಂಟರ್ ಪ್ರೈಸಸ್ ನಾಗರಾಜ್ ಶಿಬಿರದ ನಿರ್ದೇಶಕರಾದ ದಿಲೀಪ ಕುಮಾರ್ ಮಾತನಾಡಿದರು.
ತರಬೇತುದಾರರಾದ ಕವಿತಾ, ಮಂಜು ಶಿಕಾರಿ, ಅಕ್ಷಯ್, ಸ್ವಾಮಿ, ನಾರಾಯಣಸ್ವಾಮಿ, ವಿನಯ್ ಉಪಸ್ಥಿತರಿದ್ದರು.