ರಂಗ ಮಂದಿರ ದುರಸ್ಥಿ ಕಾರ್ಯ ಆರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ನಗರದ  ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ದುರಸ್ತಿ ಕಾಮಗಾರಿ  ಆರಂಭವಾಗಿದೆ.
ಸೋರುತ್ತಿದ್ದ ಛಾವಣಿಯ ಶೀಟುಗಳನ್ನು ಸರಿಪಡಿಸಲಾಗಿದೆ.  ದುರಸ್ತಿಗೆ 50 ಲಕ್ಷ ರೂ. ಮಂಜೂರಾಗಿದ್ದು ಒಂದು ತಿಂಗಳಲ್ಲಿ ರಂಗ ಮಂದಿರ  ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಸಬಹುದು.