ರಂಗ ಭೂಮಿ ಪ್ರಭಾವಿ ಮಾಧ್ಯಮ:ಚಲನಚಿತ್ರ ನಟ ಶರಣರಾಜ್

ಕಲಬುರಗಿ:ಏ.26: ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ರಂಗ ಸಂಸ್ಥೆಯು 25 ದಿನಗಳ ಕಾಲ ಮಕ್ಕಳಿಗಾಗಿ ಚಿಣ್ಣ ರ ಮೇಳ ಬೇಸಿಗೆ ಶಿಬಿರ ಏಪ್ರೀಲ್ 10 ರಿಂದ ಮೇ5ರ ವರೆಗೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಚಿಣ್ಣರಮೇಳ-2024ರ ಉದ್ಘಾಟನಾ ಸಮಾರಂಭ ನೆರವೆರಿತು. ಶಿಬಿರದ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ ಅವರು ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದರು. ವಿಶ್ವರಂಗದ 15 ವರ್ಷಗಳ ಪಯಣದಲ್ಲಿ ಏಳು ಬೀಳುಗಳನ್ನಾಡುತ್ತಾ, ರಂಗಭೂಮಿಯ ಮೂಲಕ ಶಿಕ್ಷಣ ಇಲ್ಲಿ ಪಡೆದು ಕೊಳ್ಳಲು ಅವಕಾಶವಿದೆ. ರಂಗಭೂಮಿ ಬಹಳ ಪ್ರಭಾವಿ ಮಾಧ್ಯಮ. ಇಲ್ಲಿ ಮಕ್ಕಳು ಧೈರ್ಯವಾಗಿ ವೇದಿಕೆ ಮೇಲೆ ಮಾತನಾಡಲು ಕಲಿಯುತ್ತಾರೆ, ಭಾಷೆ, ಉಚ್ಛಾರಣೆ ಸ್ಪಷ್ಟತೆ ಬರುತ್ತದೆ. ರಂಗ ಭೂಮಿಯ ಮೂಲ ಕವ್ಯಕ್ತಿತ್ವ ವಿಕಸನಗೊಳ್ಳುತ್ತದೆ.ಶಿಬಿರದ ಉದ್ದೇಶವನ್ನು ವಿವರಿಸಿದರು. ಎಲ್ಲಾ ಅಥಿತಿಗಣ್ಯರನ್ನು ಸ್ವಾಗತಿಸಿದರು. ಉದ್ಘಾಟಕರಾಗಿ ಚಲನಚಿತ್ರ ನಟರಾದ ಶರಣರಾಜ್ ಅವರು ದೀಪಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಇಂದಿನ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ರಂಗ ಶಿಬಿರಗಳು ಬಹಳ ಮಹತ್ವದ ಕೆಲಸವಾಗಿದೆ. ಯಾಕೆಂದರೆ ಶಾಲೆಯಲ್ಲಿ ನಾಲ್ಕುಗೋಡೆಗಳ ಮಧ್ಯೆ, ಶಿಸ್ತು, ನಿಯಮ ಪಾಲನೆಗಳಲ್ಲಿ ಕಲಿಯುತ್ತಾರೆ. ಇಲ್ಲಿ ರಂಗಭೂಮಿಯ ಮೂಲಕ ಆಟ, ಪಾಠಗಳನ್ನು ಸ್ವತಂತ್ರವಾಗಿ ಯಾವುದೇ ಇತಿಮಿತಿಗಳಿಲ್ಲದೇ ಕಲಿಯಬಹುದು. ಇಂಥಹ ಶಿಬಿರಗಳು ಹೆಚ್ಚಿನರೀತಿಯಲ್ಲಿ ಆಯೋಜನೆಗೊಳ್ಳಲಿ, ನಮ್ಮ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುರೇಶಕುಮಾರ ಬಡಿಗೇರ ಅವರು ವಿಶ್ವರಂಗ ತಂಡದ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ಕಾರ್ಯಕ್ರಮಗಳಿಗೆ ವಿಶ್ವರಂಗ ತಂಡಕ್ಕೆ ಬೇಕಾದಂತಹ ಸಹಾಕಾರ ಖಂಡಿತ ಕೊಡುತ್ತೇನೆಂದು ಹೇಳಿದರು. ಕಲೆ ಸಾಹಿತ್ಯ, ಸಂಗೀತ, ನೃತ್ಯ ದಂತಹಪ್ರಕಾರಗಳು ಒಂದೇ ಸೂರಿನಡಿ ಕಲ್ಪಿಸಿಕೊಟ್ಟದ್ದು ಒಂದು ಮಹತ್ವದ ಹೆಜ್ಜೆಯೇ ಸರಿ ಎಂದು ನುಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ವಿಶ್ವರಂಗ ತಂಡದ ಅಧ್ಯಕ್ಷರಾದ ನೀತಾ ಪಾಟೀಲ್ ಅವರು ಮಾಡಿದರು. ವೇದಿಕೆ ಮೇಲೆ ವಿಶ್ವರಂಗ ತಂಡದ ಕಾರ್ಯದರ್ಶಿಗಳಾದ ಸುರೇಶ್ ತಳವಾರ, ನಂದಕುಮಾರ ಮಾಲಿಪಾಟೀಲ್, ನಾಟಗರಾಜ್ ಪಾಟೀಲ್ ಅವರು ಉಪಸ್ಥಿತರಿದ್ದರು.ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶಿಬಿರದ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ಏಕಪಾತ್ರಾಭಿನಯ ಪ್ರದರ್ಶನ ಗೊಂಡವು. ಅಂಬಿಕಾ ಅವರು ಕಾರ್ಯಕ್ರಮವನ್ನುತಮ್ಮನಿರೂಪಣೆಯನ್ನು ಮುನ್ನಡೆಸಿದರು. ಶಿಬಿರದ ಸಂಪನ್ಮೂಲವ್ಯಕ್ತಿಗಳಾದ ಸೈಮನ್, ಶ್ರೀಧರ, ಶಶಿಕಲಾ ಗುತ್ತೇದಾರ್, ಯೋಗಿತಾ ಹಿರೇಮಠ, ಭಾಗ್ಯಶ್ರೀ, ಅಭಿಷೇಕ ಕಾಮಬಳೆ, ಮುರುಳಿಪಾಟೀಲ್, ಉದಯಕುಮಾರ್, ಬಾಲಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.